ಬಂಟ್ವಾಳ, ಡಿ. 03 (DaijiworldNews/SM): ಎರಡೆರಡು ಪಾಸ್ ಪೋರ್ಟ್ ಗಳನ್ನು ಹೊಂದಿ ಅಪರಾಧವೆಸಗಿದ ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಗಬೆಟ್ಟು ಗ್ರಾಮದ ಕಲ್ಕುರಿ ನಿವಾಸಿ ಲ್ಯಾನ್ಸಿ ಸಿಕ್ವೇರಾ(50) ಎರಡು ಪಾಸ್ ಪೋರ್ಟ್ ಮಾಡಿಸಿಕೊಂಡು ವಂಚಿಸಿದ ಆರೋಪಿ. ಈತನ ವಿರುದ್ಧ ದ.ಕ. ಜಿಲ್ಲಾ ಎಸ್ಪಿ ಅವರ ಮೂಲಕ ಬೆಂಗಳೂರು ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯ ಸಹಾಯಕ ಪಾಸ್ ಪೋರ್ಟ್ ಅಧಿಕಾರಿ ದೂರು ನೀಡಿದ್ದರು.
ಆತ 2002ರ ನವೆಂಬರ್ 15ರಂದು ಮುಂಬೈನಲ್ಲಿ ಪಾಸ್ ಪೋರ್ಟ್ ಪಡೆದಿದ್ದು, ಅದಕ್ಕೂ ಮೊದಲು ಬೆಂಗಳೂರಿನಿಂದ ಪಾಸ್ ಪೋರ್ಟ್ ಪಡೆದಿದ್ದ. ಎರಡೂ ಪಾಸ್ ಪೋರ್ಟ್ ಗಳಲ್ಲಿ ಮಾಹಿತಿಯನ್ನೂ ಪ್ರತ್ಯೇಕವಾಗಿ ನೀಡಿದ್ದ. ಇದೀಗ ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.