ಮಂಗಳೂರು, ಡಿ. 04 (DaijiworldNews/HR): ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಕೆ. ಕೃಷ್ಣಪ್ಪ ಮೆಂಡನ್ (88) ಅವರು ಶುಕ್ರವಾರದಂದು ನಿಧನರಾಗಿದ್ದಾರೆ.

ಕೃಷ್ಣಪ್ಪ ಮೆಂಡನ್ ಅವರು ಕಾಂಗ್ರೆಸ್ ಆಡಳಿತದಲ್ಲಿ 25-01-1993 ರಿಂದ 29-05-1993 ರವರೆಗೆ ಮಂಗಳೂರು ನಗರ ನಿಗಮದ 9 ನೇ ಮೇಯರ್ ಆಗಿ ಸೇವೆ ಸಲ್ಲಿಸಿದರು. 1984 ರಲ್ಲಿ ನಡೆದ ಮೊದಲ ಕೌನ್ಸಿಲ್ ಚುನಾವಣೆಯಿಂದ ನಾಲ್ಕು ಅವಧಿಗೆ ಅತ್ತಾವರ ವಾರ್ಡ್ನ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು, ಬಳಿಕ ಜಿಲ್ಲಾ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೆಂಡನ್ ಅವರು ದ. ಕ. ಜಿಲ್ಲಾ ಗಾಣಿಗರ ಹಾಗೂ ಸಪಲಿಗರ ಸಂಘ ಹಾಗೂ ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಯ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿರುತ್ತಾರೆ. ಅತ್ತಾವರದ ಶ್ರೀ ಉಮಮಹೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿರುತ್ತಾರೆ.
ಕೃಷ್ಣಪ್ಪ ಮೆಂಡನ್ ಅವರ ನಿಧನಕ್ಕೆ ಅನೇಕ ನಾಯಕರು ಸಂತಾಪ ವ್ಯಕ್ತಪಡಿಸಿರುತ್ತಾರೆ.