ಕಾಸರಗೋಡು, ಡಿ. 04 (DaijiworldNews/HR): ಜಿಲ್ಲೆಯಲ್ಲಿ ಶುಕ್ರವಾರ ಕೊರೊನ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, 146 ಮಂದಿಗೆ ಸೋಂಕು ದೃಢಪಟ್ಟಿದೆ.

146 ಮಂದಿಯ ಪೈಕಿ 140 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.
70 ಮಂದಿ ಗುಣಮುಖರಾಗಿದ್ದು, 1195 ಮಂದಿ ಸದ್ಯ ಚಿಕಿತ್ಸೆಯಲ್ಲಿದ್ದಾರೆ.
ಇನ್ನು ಇದುವರೆಗೆ 22, 327 ಮಂದಿಗೆ ಸೋಂಕು ದೃಢಪಟ್ಟಿದ್ದು, ಅದರಲ್ಲಿ 1063 ಮಂದಿ ವಿದೇಶಗಳಿಂದ ಹಾಗೂ 832 ಮಂದಿ ಹೊರರಾಜ್ಯಗಳಿಂದ ಬಂದವರು.
ಜಿಲ್ಲೆಯಲ್ಲಿ ಒಟ್ಟು 237 ಮಂದಿ ಮೃತಪಟ್ಟಿದ್ದು, 8027 ಮಂದಿ ನಿಗಾದಲ್ಲಿದ್ದಾರೆ.