ಕಾರ್ಕಳ,ಡಿ. 04 (DaijiworldNews/HR): ಅಕ್ರಮ ಕಸಾಯಿ ಖಾನೆಗೆ ಕರುವೊಂದನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರುವೊಂದನ್ನು ಮಾರಾಟ ಮಾಡಿದ ಹಾಗೂ ಖರೀದಿ ಮಾಡಿದ ಆರೋಪದಡಿಯಲ್ಲಿ ಇಬ್ಬರ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಈದು ಗ್ರಾಮದ ಬೊಳ್ಯೊಟ್ಟು ಮನೆಯ ಅಲ್ತಾಫ್ ಅಲಿಯಾಸ್ ಗೌಸ್ ಮತ್ತು ಈದು ಗ್ರಾಮದ ಬಟ್ಟೆನಿ ನಿವಾಸಿ ಶೇಖರ್ ಶೆಟ್ಟಿ ಕೇಸು ದಾಖಲು.
ಕರುವೊಂದನ್ನು ರೂ.2000 ಗೆ ಖರೀದಿಸಿ ಅಕ್ರಮ ಕಸಾಯಿ ಖಾನೆಗೆ ಸಾಗಾಟ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.