ಮಂಗಳೂರು, ಡಿ. 04 (DaijiworldNews/SM): ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಕೂಡಲೇ ಜಾರಿಯಾಗಬೇಕೆಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಬೂಬುಗಳನ್ನು ನೀಡಿ ಕಾನೂನಿಗೆ ತಡೆ ನಡೆಸುವುದು ಸರಿಯಲ್ಲ. ಭರತ ಭೂಮಿಯಲ್ಲಿ ಗೋವು ಪೂಜನೀಯ ಸ್ಥಾನದಲ್ಲಿದೆ. ನಮ್ಮ ಬದುಕಿಗೆ ಗೋವುಗಳು ತುಂಬಾ ಸಮೀಪವಿದೆ. ಗೋ ವಂಶ ಉಳಿಸುವ ನಿಟ್ಟಿನಲ್ಲಿ ಕಾನೂನು ಬರಬೇಕಾಗಿದೆ. ರಾಜ್ಯ ಸರಕಾರ ಕೂಡಲೇ ತೀರ್ಮಾನ ತೆಗೆದುಕೊಳ್ಳಲಿ ಎಂದು ಮಂಗಳೂರಿನಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.