ಉಡುಪಿ, ಡಿ. 04 (DaijiworldNews/SM): ಕರಾವಳಿಯಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿದ್ದು, ಉಡುಪಿಯಲ್ಲಿ ಶುಕ್ರವಾರದಂದು 14 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ನಡುವೆ 17 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಒಟ್ಟು ಸಂಖ್ಯೆ 22376ಕ್ಕೆ ಏರಿಕೆಯಾಗಿದೆ. 196 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ 187 ಮಂದಿ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯ ತನಕ 252854 ಒಟ್ಟು ಪರೀಕ್ಷೆಗೊಳಪಟ್ಟಿದ್ದಾರೆ. ಈ ಪೈಕಿ 230095 ಮಂದಿಯ ವರದಿ ನೆಗೆಟಿವ್ ಆಗಿದೆ. ಉಳಿದಂತೆ 22759 ಮಂದಿಯಲ್ಲಿ ಇಲ್ಲಿಯ ತನಕ ಸೋಂಕು ಪತ್ತೆಯಾಗಿದೆ.