ಬಂಟ್ವಾಳ, ಜೂ 11: ಕೋಸ್ಟಲ್ ವುಡ್ ನ ಚಲನಚಿತ್ರ ನಟನೋರ್ವ ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ಸಮೀಪದ ಬಡ್ಡಕಟ್ಟೆ ಎಂಬಲ್ಲಿ ನಡೆದಿದೆ. ಗಣೇಶ್ ಮತ್ತು ಪುಷ್ಪರಾಜ್ ಅವರು ಹಲ್ಲೆಗೊಳಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಸುರೇಂದ್ರ ಶೆಟ್ಟಿ ಬಂಟ್ವಾಳ ಹಲ್ಲೆ ನಡೆಸಿದವರು.
ಘಟನೆಯ ವಿವರ: ಸೋಮವಾರ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಬಿಜೆಪಿ ಕಾರ್ಯಕರ್ತರಾದ ಗಣೇಶ್, ಚರಣ್, ಪುಷ್ಪ ರಾಜ್ , ಮತ್ತಿತರರು ಬಡ್ಡಕಟ್ಟೆಯಲ್ಲಿರುವ ಹೊಟೇಲ್ ಗೆ ಊಟಕ್ಕೆ ತೆರಳಿದ ವೇಳೆ ಸುರೇಂದ್ರ ಮತ್ತು ಅವರ ತಂಡ ಕಾರಿನಿಂದಿಳಿದು ತಲವಾರು ಹಿಡಿದು ಹೋಟೆಲ್ ಪ್ರವೇಶಿಸಿ ಊಟಕ್ಕೆ ಕುಳಿತಿದ್ದ ಬಿಜೆಪಿ ಕಾರ್ಯಕರ್ತರಿಗೆ ಅವ್ಯಾಚ ಶಬ್ದಗಳಿಂದ ಬೈದುಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸುರೇಂದ್ರ ಬಂಟ್ವಾಳ ಅವರ ತಂಡದ ಯುವಕನಿಗೆ ಬಿಜೆಪಿ ಕಾರ್ಯಕರ್ತರು ಎನ್ನಲಾದ ಯುವಕರು ಭಾನುವಾರ ಪೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟು ಹಾಕಿದ್ದ ಎಂಬ ಕಾರಣಕ್ಕೆ ಸೆಲೂನ್ ಗೆ ನುಗ್ಗಿ ಹಲ್ಲೆ ನಡೆಸಿದ್ದರು . ಹಲ್ಲೆಗೊಳಗಾದ ಯುವಕ ದೀಕ್ಷಿತ್ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಭುವಿತ್ ಮತ್ತು ಅತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ಮುಂದುವರಿದ ಭಾಗವಾಗಿ ಜೂ 11 ರ ಸೋಮವಾರ ತಲವಾರ್ ಬೀಸಲಾಗಿದೆಯೋ ಅತನ ಇನ್ನೇನು ಕಾರಣಗಳಿದೆಯೋ ಎನ್ನುವುದು ತನಿಖೆಯ ಬಳಿಕ ತಿಳಿಯಬೇಕಾಗಿದೆ.
ಸುರೇಂದ್ರ ಬಂಟ್ವಾಳ ಅವರು ಈ ಹಿಂದೆ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು ನಂತರ ಆ ಸಂಘಟನೆಯ ಜೊತೆ ಮುನಿಸಿಕೊಂಡು ಕಾಂಗ್ರೇಸ್ ಜೊತೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ತುಳು ಚಲನಚಿತ್ರಗಳಲ್ಲೂ ನಟಿಸಿದ್ದಾರೆ . ಇದೀಗಾ ತಲವಾರು ಹಿಡಿದು ಅವ್ಯಾಚ್ಯ ಶಬ್ದಗಳಿಂದ ಬೈಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.