ಕಾಸರಗೋಡು, ಡಿ.05 (DaijiworldNews/PY): ಗಾಂಜಾ ಹಾಗೂ ಮಾದಕ ದ್ರವ್ಯ ಸಹಿತ ಕುಂಬಳೆ ನಿವಾಸಿಗಳಿಬ್ಬರನ್ನು ಕೋಜಿಕ್ಕೋಡ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕುಂಬಳೆಯ ಅಹಮ್ಮದ್ ಜಲಾಲುದ್ದೀನ್ (19) ಮತ್ತು ಬಿ ಎಂ . ಉಮ್ಮರ್ (27) ಎಂದು ಗುರುತಿಸಲಾಗಿದೆ.
ಆರೋಪಿಗಳ ಬಳಿಯಿಂದ ಏಳು ಕಿಲೋ ಗಾಂಜಾ ಹಾಗೂ 25 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ಕೂಟರ್ ಅನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಬ್ಯಾಗ್ನಲ್ಲಿ ಗಾಂಜಾ ಹಾಗೂ ಮಾದಕ ದ್ರವ್ಯ ಪತ್ತೆಯಾಗಿದೆ. ಆಗ್ರಾದಿಂದ ರೈಲು ಮೂಲಕ ಮಾದಕ ವಸ್ತುಗಳನ್ನು ತಂದಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.