ಮಂಗಳೂರು, ಡಿ.05 (DaijiworldNews/MB) : ಆರೋಗ್ಯ ಅಪಾಯವನ್ನು ತಂದೊಡ್ಡಿದ್ದ ಫಿಶ್ ಮೀಲ್ ಕಾರ್ಖಾನೆಗಳ ಮಾಲಿನ್ಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ನಿಯಮಗಳ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಿ, ಹಾಗೆಯೇ ತೆಗೆದುಕೊಂಡ ಕ್ರಮ ಮತ್ತು ಅರ್ಜಿದಾರರ ಮಾಹಿತಿಯ ಬಗ್ಗೆ ಎರಡು ವಾರಗಳಲ್ಲಿ ಅವರ ಕಚೇರಿಗೆ ವರದಿ ನೀಡಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಮಂಗಳೂರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿಯವರಿಗೆ ಆದೇಶಿಸಿದ್ದಾರೆ.

ಸಸಿಹಿತ್ಲು, ಅಗ್ಗಿದಾಕಲಿಯ, ಪಾವಂಜೆ, ಚೇಳ್ಯಾರು, ಮುಕ್ಕಾ ಮತ್ತು ಹಳೆಯಂಗಡಿ ನಿವಾಸಿಗಳು ಸುತ್ತಮುತ್ತಲಿನ ಫಿಶ್ ಮೀಲ್ ಕಾರ್ಖಾನೆಗಳಿಂದ ಬರುವ ದುರ್ವಾಸನೆ ಹೊರಹೊಮ್ಮುತ್ತಿದೆ ಎಂದು ಆ ಪ್ರದೇಶದ ಜನರು ದೂರು ನೀಡಿದ್ದರು.
ಮೂರು ಕಾರ್ಖಾನೆಗಳಾದ ಮುಕ್ಕಾ ಫಿಶ್ ಮೀಲ್ ಆಂಡ್ ಸೀಫುಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಬಾವಾ ಫಿಶ್ಮೀಲ್ ಇಂಡಸ್ಟ್ರೀಸ್ ಮತ್ತು ಬಾವಾ ಎಚ್ಕೆಎ ಮತ್ತು ಸನ್ಸ್ ನಿಂದಾಗಿ ಈ ಮಾಲಿನ್ಯ ಉಂಟಾಗುತ್ತಿದೆ. ಈ ಮಾಲಿನ್ಯವರು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿದೆ ಎಂದು ದೈಜಿವರ್ಲ್ಡ್ ಪ್ರಕಟಿಸಿತ್ತು.
ಮುಕ್ಕಾ, ಸಸಿಹಿತ್ಲು ಮತ್ತು ಮಿತ್ರಪಟ್ನದ ಸ್ಥಳೀಯರು ಸಸಿಹಿತ್ಲು ಸುತ್ತಮುತ್ತಲಿನ ಮೀನಿನ ಎಣ್ಣೆ ತೆಗೆಯುವ ಮೂರು ಕಾರ್ಖಾನೆಗಳ ವಿರುದ್ದ ಆಕ್ರೋಶಗೊಂಡಿದ್ದಾರೆ. ಈ ಕಾರ್ಖಾನೆಗಳಿಂದ ಉಂಟಾಗುವ ಮಾಲಿನ್ಯವು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಇದರಿಂದಾಗಿ ವಾಯು ಶಬ್ದ, ಜಲ ಮಾಲಿನ್ಯ ಉಂಟಾಗುತ್ತಿದೆ. ಸುತ್ತಮುತ್ತಲಿನ ಜನರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ಕಾರ್ಖಾನೆಗಳು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಮೂರು ಕಾರ್ಖಾನೆಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಹಲವಾರು ವರ್ಷಗಳಿಂದ, ಸ್ಥಳೀಯರು ಧ್ವನಿ ಎತ್ತುತ್ತಿದ್ದಾರೆ. ಹಾಗೆಯೇ ಈ ಬಗ್ಗೆ ಜನರ ಪ್ರತಿನಿಧಿಗಳು, ಪೊಲೀಸ್, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಮೂರು ಕಾರ್ಖಾನೆಗಳ ವಿರುದ್ದ ಕ್ರಮಕೈಗೊಳ್ಳುವಂತೆ ಸ್ಥಳೀಯರು ಮಾಡಿದ ಪ್ರಯತ್ನಗಳು ವ್ಯರ್ಥವಾಗಿದೆ. ಪಾವಂಜೆ ದೇವಸ್ಥಾನದ, ಶ್ರೀನಿವಾಸ್ ಸಂಸ್ಥೆ ಕೂಡ ಈ ಕಾರ್ಖಾನೆಗಳ ವಿರುದ್ಧ ದೂರು ನೀಡಿದೆ ಹಾಗೂ ಸ್ಥಳೀಯರು ಕಾರ್ಖಾನೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.