ಮಂಗಳೂರು, ಡಿ.05 (DaijiworldNews/MB) : ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟೊಂದು ಸಮುದ್ರದಲ್ಲಿ 15 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿ ನಾಪತ್ತೆಯಾದ ಆರು ಮಂದಿ ಮೀನುಗಾರರ ಪೈಕಿ ಐವರ ಮೃತದೇಹ ಈಗಾಗಲೇ ಪತ್ತೆಯಾಗಿದ್ದು ಮೀನುಗಾರಿಕಾ ದೋಣಿ ಮೇಲಕ್ಕೆತ್ತಲು ಬಾರ್ಜ್ ಹಾಗೂ ಕ್ರೇನ್ ಬಳಕೆ ಸಹಾಯಕವಾಗದ ಕಾರಣ, ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.

ದೋಣಿ ದುರಂತದಲ್ಲಿ ಮೃತಪಟ್ಟ ಆರು ಜನರಲ್ಲಿ, ಐವರ ಮೃತದೇಹವು ಈಗಾಗಲೇ ಪತ್ತೆಯಾಗಿವೆ. ಆದರೆ ಬೆಂಗ್ರೆಯ ಅನ್ಸಾರ್ (31) ಇನ್ನೂ ಕೂಡಾ ಪತ್ತೆಯಾಗಿಲ್ಲ. ಮುಳುಗಿದ ದೋಣಿಯೊಳಗೆ ಅನ್ಸಾರ್ ಅವರ ದೇಹವು ಸಿಲುಕಿಕೊಂಡಿರಬಹುದೆಂದು ನಿರೀಕ್ಷಿಸಲಾಗಿದೆ. ಜಿಲ್ಲಾಡಳಿತದ ಸೂಚನೆಯ ಮೇರೆಗೆ, ಈಜು ತಜ್ಞರು 'ಧಾರ್ತಿ' ಟಗ್ ಸಹಾಯದಿಂದ ದೋಣಿಯನ್ನು ಅಲ್ಲಾಡಿಸಿ ದೇಹವನ್ನು ಹುಡುಕಿದರು ಪ್ರಯತ್ನ ಯಶಸ್ವಿಯಾಗಲಿಲ್ಲ.
ಈ ಬಗ್ಗೆ ಮಾಹಿತಿ ನೀಡಿರುವ ಪರ್ಸೀನ್ ದೋಣಿಯ ಮಾಲೀಕ ಮೀನುಗಾರ ಮೋಹನ್ ಬೆಂಗ್ರೆ, ದೋಣಿ ಮುಳುಗಿದ ಪ್ರದೇಶವು ಮೀನುಗಾರಿಕೆ ಕಾರ್ಯದಲ್ಲಿ ನಿರತವಾಗಿದೆ. ಈ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವ ಎಲ್ಲಾ ದೋಣಿಗಳಿಗೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.
ಮುಳುಗಿದ 'ಶ್ರೀ ರಕ್ಷಾ' ದೋಣಿ ಸುಮಾರು 65 ಟನ್ ತೂಕವಿದ್ದು, ಬಾರ್ಜ್ಗಳು ಅಥವಾ ಟಗ್ಗಳು ಅದನ್ನು ನೀರಿನಿಂದ ಮೇಲಕ್ಕೆತ್ತಲು ಸಾಧ್ಯವಿಲ್ಲ. ಟಗ್ ಅನ್ನು ಬಳಸಿದಾಗ, ಅದನ್ನು ಸಂಪೂರ್ಣವಾಗಿ ನೀರಿನಿಂದ ಮೇಲಕ್ಕೆತ್ತಲು ಸಾಧ್ಯವಿಲ್ಲ ಎಂದು ಅರಿವಾಯಿತು. ಈಗ ಇಲಾಖೆಯು ಅಂತಹ ಸೌಲಭ್ಯಗಳನ್ನು ಹೊಂದಿರದ ಕಾರಣ ಮುಂದಿನ ಕಾರ್ಯತಂತ್ರವನ್ನು ಸರ್ಕಾರ ನಿರ್ಧರಿಸಬೇಕಾಗಿದೆ.
ಈ ಘಟನೆಯ ವಿವರಗಳನ್ನು ಮೀನುಗಾರಿಕೆ ಉಪ ನಿರ್ದೇಶಕರಿಗೆ ಕಳುಹಿಸಲಾಗಿದೆ ಮೀನುಗಾರಿಕೆ ಉಪನಿರ್ದೇಶಕ ಪಾರ್ಶ್ವನಾಥ್ ತಿಳಿಸಿದ್ದಾರೆ.
ಶುಕ್ರವಾರ ಮೀನುಗಾರರಿಗೆ ರಜಾದಿನವಾಗಿರುವುದರಿಂದ ಅವರು ಅನ್ಸಾರ್ನ ಪತ್ತೆಕಾರ್ಯ ನಡೆಸಿಲ್ಲ. ಉರ್ವಾ ಮಾರಿಯಮ್ಮ ದೇವಸ್ಥಾನದ ಮಾಸಿಕ ಪೂಜೆಯಿದ್ದ ಕಾರಣ ಪರ್ಸಿನ್ ಬೋಟ್ ಮೀನುಗಾರರು ಮೀನುಗಾರಿಕೆ ನಿಲ್ಲಿಸಿ ಪೂಜೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ಬೋಟ್ ಮಾಲೀಕ ಉಮೇಶ್ ಹೇಳಿದರು.
ಮೃತ ಮೀನುಗಾರರ ಕುಟುಂಬಗಳಿಗೆ ಸಂಘವು ಸಹಾಯ ಮಾಡುತ್ತದೆ. ಹಣಕಾಸಿನ ನೆರವು ನೀಡುತ್ತದೆ ಎಂದು ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಶಶಿಕುಮಾರ್ ಬೆಂಗ್ರೆ ಹೇಳಿದರು.