ಮಂಗಳೂರು, ಡಿ.05 (DaijiworldNews/MB) : ಬಿಜೈನ ಅಪಾರ್ಟ್ಮೆಂಟ್ನ ಗೋಡೆಯಲ್ಲಿ ಹಾಗೂ ನಗರದ ಕೋರ್ಟ್ ರೋಡ್ನಲ್ಲಿ ಕೋರ್ಟ್ಗೆ ಸಮೀಪವಾಗಿರುವ ಕೋರ್ಟ್ ಪ್ರಿಮಿಸಸ್ನ ಹಳೇ ಪೊಲೀಸ್ ಔಟ್ ಪೋಸ್ಟ್ನ ಗೋಡೆಯ ಮೇಲೆ ಪ್ರಚೋಧನಕಾರಿ ಗೋಡೆ ಬರಹಕ್ಕೆ ಸಂಬಂಧಿಸಿ ಇಬ್ಬರನ್ನು ನಗರ ಪೊಲೀಸರು ಬಂಧಿಸಿದ್ದಾರೆ.


ಈ ಬಗ್ಗೆ ಡಿಸೆಂಬರ್ 5 ರ ಶನಿವಾರ ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಸ್, "ಬಂಧಿತರನ್ನು ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್ ಮತ್ತು ಮಾಜ್ ಮುನೀರ್ ಅಹ್ಮದ್ ಎಂದು ಗುರುತಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಆರೋಪಿ ಮೊಹಮ್ಮದ್ ಶಾರಿಕ್ (22) ಬಿ.ಕಾಂ ಮುಗಿಸಿ ತೀರ್ಥಹಳ್ಳಿಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದಾನೆ. ಮತ್ತೊಬ್ಬ ಆರೋಪಿ ಮಜ್ ಮುನೀರ್ ಅಹಮದ್ (21) ಮಂಗಳೂರಿನ ಖಾಸಗಿ ಕಾಲೇಜಿನಿಂದ ಬಿ ಟೆಕ್ ಓದುತ್ತಿದ್ದಾನೆ. ಆರ್ಯ ಸಮಾಜ ರಸ್ತೆ ಬಳಿಯ ಬಾಡಿಗೆ ಮನೆಯಲ್ಲಿ ತಂಗಿದ್ದಾನೆ. ಮಂಗಳೂರಿನಲ್ಲಿ ಮೂರು ತಿಂಗಳಿನಿಂದ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಪ್ರಚಾರವನ್ನು ಪಡೆಯುವುದೇ ಈ ಆರೋಪಿಗಳು ಈ ಅಪರಾಧ ಮಾಡಿದ ಉದ್ದೇಶವಾಗಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
"ಅವರು ಬಿಜೈನ ಗೋಡೆಗಳ ಮೇಲೆ ಬರೆಯುವ ಮೂರು ವಾರಗಳ ಮೊದಲು ಅವರು ಕೋರ್ಟ್ ರಸ್ತೆಯಲ್ಲಿ ಗೋಡೆಯಲ್ಲಿ ಬರೆದಿದ್ದಾರೆ. ಕೋರ್ಟ್ ರಸ್ತೆಯಲ್ಲಿ ಗೋಡೆ ಬರಹವನ್ನು ಅರೇಬಿಕ್ ಭಾಷೆಯಲ್ಲಿ ಬರೆಯದ್ದಾಗಿದ್ದು ಇಂಗ್ಲಿಷ್ ಲಿಪಿಯಲ್ಲಿ ಬರೆಯಲಾಗಿದೆ. ಆದರೆ ಇಲ್ಲಿನ ಜನರಿಗೆ ಭಾಷೆ ಅರ್ಥವಾಗದ ಕಾರಣ ಯಾರೂ ಈ ಗೋಡೆಬರಹವನ್ನು ಗಮನಿಸಿರಲಿಲ್ಲ. ಪ್ರಚಾರ ಲಭಿಸದ ಕಾರಣ ಈ ಆರೋಪಿಗಳು ಬಿಜೈನ ಆಪಾರ್ಟ್ಮೆಂಟ್ನ ಗೋಡೆಯಲ್ಲಿ ಬರೆಯಲು ತೀರ್ಮಾನಿಸಿದರು ಎಂದು ಆಯುಕ್ತರು ಮಾಹಿತಿ ನೀಡಿದರು.
"ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಜಾಲಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ನಾವು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಮತ್ತು ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡುತ್ತೇವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು. ಅವರು ಯಾವುದಾದರೂ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಮಂಗಳೂರು ನಗರದ ಬಿಜೈನ ಅಪಾರ್ಟ್ಮೆಂಟ್ವೊಂದರ ಗೋಡೆಯ ಮೇಲೆ ಉಗ್ರರ ಪರ ಬರೆಯಲಾಗಿತ್ತು. ಹಾಗೆಯೇ ಇದಾದ ಕೆಲ ದಿನದಲ್ಲಿ ಗರದ ಕೋರ್ಟ್ ರೋಡ್ನಲ್ಲಿ ಕೋರ್ಟ್ಗೆ ಸಮೀಪವಾಗಿರುವ ಕೋರ್ಟ್ ಪ್ರಿಮಿಸಸ್ನ ಹಳೇ ಪೊಲೀಸ್ ಔಟ್ ಪೋಸ್ಟ್ನ ಗೋಡೆಯ ಮೇಲೆ ಬರೆದಿದ್ದ ಮತ್ತೊಂದು ಪ್ರಚೋದನಕಾರಿ ಗೋಡೆ ಬರಹ ಗಮನಕ್ಕೆ ಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನದ ವರದಿಯನ್ನು ನವೆಂಬರ್ 4 ರ ಶುಕ್ರವಾರ ಪೊಲೀಸರು ನಿರಾಕರಿಸಿದ್ದರು. ಆದರೆ ಇಬ್ಬರನ್ನು ಬಂಧಿಸಿರುವ ಬಗ್ಗೆ ಶನಿವಾರ ಖಚಿತಪಡಿಸಿದ್ದಾರೆ.