ಉಡುಪಿ, ಡಿ.05 (DaijiworldNews/MB) : ಪ್ರಸ್ತುತ ಶೀರೂರು ಮಠವನ್ನು ನೋಡಿಕೊಳ್ಳುತ್ತಿರುವ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಶಿರೂರು ಮಠದ ಉತ್ತರಾಧಿಕಾರಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ನಾವು ಈಗಾಗಲೇ ಶೀರೂರು ಮಠದ ಉತ್ತರಾಧಿಕಾರಿಯಾಗಲು ಓರ್ವರನ್ನು ಆಯ್ಕೆ ಮಾಡಿದ್ದೇವೆ. ಉತ್ತರಾಯಣದಲ್ಲಿ ಅವರು ಉತ್ತರಾಧಿಕಾರಿ ಸ್ವೀಕಾರಿಸಲು ನಾವು ನಿರ್ಧರಿಸಿದ್ದೇವೆ. ಅಷ್ಟಮಠಾಧೀಷರ ಸಹಕಾರದೊಂದಿಗೆ ನಾವು ಇಲ್ಲಿಯವರೆಗೆ ಕರ್ತವ್ಯಗಳನ್ನು ನಿರ್ವಹಿಸಿದ್ದೇವೆ. ಭವಿಷ್ಯದಲ್ಲಿಯೂ ಅವರ ಹಾಗೂ ಭಕ್ತರ ಸಹಕಾರವನ್ನು ನಾವು ನಿರೀಕ್ಷಿಸುತ್ತೇವೆ" ಎಂದು ಸ್ವಾಮೀಜಿ ಹೇಳಿದರು.







ಡಿಸೆಂಬರ್ 5 ರ ಶನಿವಾರ ಶೀರೂರು ಮಠದಲ್ಲಿ ನಡೆದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಲಕ್ಷ್ಮೀವರ ತೀರ್ಥ ಶ್ರೀಪಾದರು ಈಗಾಗಲೇ ಶಿರೂರು ಮೂಲ ಮಠದ ಮತ್ತು ಉಡುಪಿ ನಿವಾಸದ ನವೀಕರಣ ಮತ್ತು ಆಚರಣೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದಾರೆ. ಹೊಸ ದೇವಾಲಯದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಮುಖ್ಯ ದೇವತೆಯನ್ನು ಪ್ರತಿಷ್ಠಾಪಿಸಲು ನಾವು ನಿರ್ಧರಿಸಿದ್ದೇವೆ. ಹಾಗೆಯೇ ಶೀರೂರು ಮೂಲ ಮಠದ ಸಮೀಪದಲ್ಲಿರುವ ದುರ್ಗಾಪರಮೇಶ್ವರಿ ದೇವಿಯ ಗದ್ದುಗೆಯು ಗ್ರಾಮಸ್ಥರ ಸಹಾಯದಿಂದ ಸಂಪೂರ್ಣ ನವೀಕೃತಗೊಂಡಿದೆ. ಅದಲ್ಲದೇ ಸಮೀಪದ ಪಾಪುಜೆ ಮಠವು ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು ಅದರ ಜೀಣೋದ್ಧಾರಕ್ಕೂ ಸಂಕಲ್ಪಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಶೀರೂರು ಮಠದ ದೈನಂದಿನ ಖರ್ಚುವೆಚ್ಚಗಳು ಹಾಗೂ ಶೀರೂರು ಗೋ ಶಾಲೆಯ ನಿರ್ವಹಣೆ ಇವೆಲ್ಲವೂ ಮಣಿಪಾಲದಲ್ಲಿರುವ ಲಕ್ಷ್ಮೀ ಸಮ್ಮಿಟ್ ಕಟ್ಟಡದಿಂದ ಬರುವ ಬಾಡಿಗೆ ಹಾಗೂ ಉಡುಪಿ ರಥಬೀದಿಯ ಶೀರೂರು ಮಠದ ಸಮೀಪದ ಕಟ್ಟಡದಲ್ಲಿ ಬರುವ ಬಾಡಿಗೆಯಿಂದ ಭರಿಸಲಾಗಿದೆ. ಈ ಎರಡು ವರ್ಷ ಆರು ತಿಂಗಳ ಆಡಳಿತ ಜವಾಬ್ದಾರಿಯಲ್ಲಿ ನಾವು ಈ ಮಠದ ಸೊತ್ತನ್ನು ಮಾಟಾ ಮಾಡಿಲ್ಲ ಅಥವಾ ಅಡಮಾನ ಇಟ್ಟಿಲ್ಲ" ಎಂದು ಸ್ಪಷನೆ ನೀಡಿದ್ದಾರೆ.
ಕನಕ ಮಾಲ್ನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋದೆ ಸ್ವಾಮೀಜಿ, "ನೆನೆಗುದಿಗೆ ಬಿದ್ದಿದ್ದ ಕನಕ ಮಾಲ್ನ ಅಭಿವೃದ್ಧಿ ಅಥವಾ ನಿರ್ಮಾಣಕ್ಕೆ ಸಂಬಂಧಿಸಿದ ಒಪ್ಪಂದದ ಅಡಿಯಲ್ಲಿ ಉದ್ಭವಿಸಿರುವ ಮನಸ್ತಾಪವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದೆ. ವಿವಾದವು ಕೊನೆಗೊಳ್ಳುವ ಆಶಾಕಿರಣ ಮೂಡಿಬಂದಿದೆ. ಶ್ರೀ ಮಠದ ಸಂಪೂರ್ಣ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಂಗ ಪ್ರಕ್ರಿಯೆ ಮೂಲಕ ಸೂಕ್ತ ಕ್ರಮ ಕೈಗೊಳ್ಳಲು ಕಾನೂನು ತಜ್ಞರ ಸಲಹೆಯನ್ನು ಪಡೆದುಕೊಳ್ಳಲಾಗಿದೆ. ಈ ಕುರಿತು ಮೊದಲ ಹಂತದ ಉಪಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ" ಎಂದರು.
"ಮುಂಬೈನ ಅನುಭವಿ ಉದ್ಯಮಿ ಮತ್ತು ಮಠದ ಭಕ್ತರು ಆಗಿರುವ ಓರ್ವರು ಜಂಟಿ ಅಭಿವೃದ್ದಿ ಮಾದರಿಯಲ್ಲಿ ಕನಕ ಮಾಲ್ನ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಉದ್ದೇಶಿತ ನೆಲಮಹಡಿ ಮತ್ತು ೮ ಮಹಡಿಗಳ ಪೈಕಿ ಮೇಲಿನ ನಾಲ್ಕು ಮಹಡಿಗಳನ್ನು ಸುಸಜ್ಜಿತ ರೀತಿಯಲ್ಲಿ ಸಂಪೂರ್ಣಗೊಳಿಸಿ ಶೀರೂರು ಮಠಕ್ಕೆ ಹಸ್ತಾಂತರಿಸಿದ್ದಾರೆ. ಕನಕ ಮಾಲ್ನ ಯೋಜನೆಗೆ ಈ ಉದ್ಯಮಿಯು ಕಾರ್ಪೋರೇಷನ್ ಬ್ಯಾಂಕ್ನಿಂದ ಪಡೆದಿರುವ ಸಾಲವನ್ನು ಯೋಜನೆ ನಿಂತಿರುವ ಕಾರಣದಿಂದ ವಸೂಲಾತಿ ಕಾನೂನು ಕ್ರಮವನ್ನು ಜರಗಿಸುವ ಹಿನ್ನೆಲೆಯಲ್ಲಿ ರೂ. 26.50 ಕೋಟಿ ಮರು ಪ್ರಸಕ್ತ ಮೌಲ್ಯದ ಖುಣಭಾರವನ್ನು ಸೆಟ್ಲ್ ಮೆಂಟ್ ಸ್ಕೀಮ್ ಅನ್ವಯ ರೂ. 10.75 ಕೋಟಿ ಮರುಪಾವತಿಸಲು ಮೌಖಿಕ ಒಪ್ಪಂದ ಏರ್ಪಟ್ಟಿದೆ. ಅದರ ಅನ್ವಯ ಈ ಉದ್ಯಮಿಯವರು 10 ಕೋಟಿ ರೂ.ಗಳನ್ನು ಮರುಪಾವತಿ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ" ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಹಾಗೆಯೇ ಕಟ್ಟಡ ಕಾಮಗಾರಿಯನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಪಾವತಿಸಲು ಬಾಕಿ ಇರುವ ರೂ. 5 ಕೋಟಿ ಮೊತ್ತವನ್ನು ಶ್ರೀ ಶೀರೂರು ಮಠಕ್ಕೆ ಪಾವತಿಸಲು ಸಹ ಒಪ್ಪಿಕೊಂಡಿದ್ದಾರೆ. ಈ ರೀತಿಯಲ್ಲಿ ಪರಸ್ಪರ ಮಾತುಕತೆಯ ಮೂಲಕ ಕಟ್ಟಡ ಅಭಿವೃದ್ದಿ ಕುರಿತಾದ ಸಮಸ್ಯೆಗಳ್ನನು ಸಂಧಾನ ಮಾರ್ಗದಿಂದ ಪರಿಹರಿಸಲು ನಮ್ಮೊಂದಿಗೆ ಸಹಕರಿಸಿದ ಡಾ. ರವೀಂದ್ರನಾಥ್ ಶ್ಯಾನುಭೋಗ, ಪ್ರೊ. ಎಂ. ಬಿ. ಪುರಾಣಿಕ್, ತೋಟದ ಮನೆ ದಿವಾಕರ್ ಶೆಟ್ಟಿ ಹಾಗೂ ತೋನ್ಪೆ ಜಯಕೃಷ್ಣ ಶೆಟ್ಟಿ ಮತ್ತಿತರ ಗಣ್ಯರ ಸಹಕಾರ ಹಾಗೂ ಅಮೂಲ್ಯ ಕೊಡುಗೆಯನ್ನು ಈ ಸಂದರ್ಭ ನಾನು ನೆನೆಯುತ್ತಾ ಅವರನ್ನು ಅಭಿನಂದಿಸುತ್ತೇನೆ. ಈ ಸಮಗ್ರ ಪ್ರಕ್ರಿಯೆಯು ಮುಂದಿನ ಮಾರ್ಚ್ ತಿಂಗಳ ಅಂತ್ಯದೊಳಗೆ ಮುಕ್ತಾಯಗೊಳ್ಳಲಿದೆ ಎಂದು ನಾನು ಆಶಿಸುತ್ತೇನೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಮಾತನಾಡಿ, ''ಎರಡು ವರ್ಷಗಳ ನಂತರ ಪ್ರತಿಯೊಂದು ಸಮಸ್ಯೆಗಳು ಒಂದೊಂದಾಗಿ ಬಗೆಹರಿಯುತ್ತವೆ. ಒಳ್ಳೆಯ ದಿನಗಳು ಬರಲಿವೆ ಮತ್ತು ಶೀಘ್ರದಲ್ಲೇ ಶೀರೂರು ಮಠಕ್ಕೆ ಉತ್ತಮ ಉತ್ತರಾಧಿಕಾರಿ ಬರಲಿದ್ದಾರೆ. ಇಡೀ ಸಮಾಜ ಅವರನ್ನು ಸ್ವಾಗತಿಸುತ್ತದೆ. ಕನಕ ಮಹಲ್ಗೆ ಗೋಲ್ಡನ್ ಮಹಲ್ ಆಗಲಿದೆ. ಯೋಜನೆಗಳು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಯಲಿ" ಎಂದು ಹಾರೈಸಿದರು.
ಶೀರೂರು ಉತ್ತರಾಧಿಕಾರಿ ನೇಮಕಾತಿ ಕುರಿತು ಮಾತನಾಡಿದ ರತ್ನಾಕರ್ ಕುಮಾರ್, "ಹಣಕಾಸಿನ ವಿಷಯಗಳು ನಿಧಾನವಾಗಿ ಬಗೆಹರಿಯುತ್ತಿವೆ. ಎಲ್ಲಾ ಹಣಕಾಸಿನ ಸಮಸ್ಯೆಗಳು ಒಂದು ಹಂತದಲ್ಲಿ ಉಂಟಾಗಿದ್ದು ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುತ್ತಿದೆ. ಮುಂಬರುವ ಉತ್ತರಾಧಿಕಾರಿ ಯಾವುದೇ ಹಣಕಾಸಿನ ತೊಂದರೆಗಳನ್ನು ಅನುಭವಿಸುವುದಿಲ್ಲ. ಶೀರೂರು ಮಠಕ್ಕೆ ಸಂಬಂಧಿಸಿ ಬ್ಯಾಂಕಿನಲ್ಲಿ ಯಾವುದೇ ಠೇವಣಿ ಇಲ್ಲ. ಹಣಕಾಸು ಮತ್ತು ಕಾನೂನು ವಿಷಯಗಳಿಂದ ಅನುಮತಿ ಪಡೆಯಲು ಕನಿಷ್ಠ 18 ತಿಂಗಳುಗಳು ಬೇಕಾಗುತ್ತದೆ" ಎಂದರು.
ಮಠದ ತೆರಿಗೆಯ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳೊಂದಿಗಿನ ವಿವಾದದ ಬಗ್ಗೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ ಉಪಾಧ್ಯಕ್ಷ ಮತ್ತು ಅನುಭವಿ ಲೆಕ್ಕಪರಿಶೋಧಕ ಎಚ್ ವಿ ಗೌತಮ್ ಈ ಸಭೆಯಲ್ಲಿ ವಿವರಿಸಿದರ.