ಕಾಸರಗೋಡು, ಡಿ.05 (DaijiworldNews/MB) : ಆಟೋ ರಿಕ್ಷಾ ಹಾಗೂ ಓಮ್ನಿ ನಡುವೆ ಉಂಟಾದ ಅಪಘಾತದಲ್ಲಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಇಂದು ಸಂಜೆ ಕೇರಳ - ಕರ್ನಾಟಕ ಗಡಿಯ ಆರ್ಲಪದವು ಎಂಬಲ್ಲಿ ನಡೆದಿದೆ.





ಮೃತಪಟ್ಟವರನ್ನು ಆದೂರು ಕೋಯಕೂಡ್ಲುವಿನ ರಾಮ (42) ಮೃತಪಟ್ಟವರು. ಸಂಬಂಧಿಕರಾದ ಶಶಿ, ಅಶ್ವಿನ್ ಹಾಗೂ ಆಟೋ ಚಾಲಕ ಕರ್ಮಂತೋಡಿಯ ಮುಹಮ್ಮದ್ ಗಾಯಗೊಂಡಿದ್ದಾರೆ.
ರಾಮರವರ ಮನೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದಕ್ಕೆ ಸಂಬಂಧಿಕರೊಬ್ಬರನ್ನು ಆಹ್ವಾನಿಸಲು ವಾಣಿನಗರಕ್ಕೆ ತೆರಳಿ ಮರಳುತ್ತಿದ್ದಾಗ ಆರ್ಲಪದವು ಸಮೀಪ ಈ ಅಪಘಾತ ನಡೆದಿದೆ.
ಡಿಕ್ಕಿಯ ರಭಸಕ್ಕೆ ಆಟೋದಿಂದ ಮೂವರು ಹೊರಕ್ಕೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ದರೂ ದಾರಿ ಮಧ್ಯೆ ಮೃತಪಟ್ಟರು. ಗಾಯಗೊಂಡ ಇತರ ಮೂವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.