ಮಂಗಳೂರು, ಡಿ.06 (DaijiworldNews/MB) : ರಾ.ಹೆ 66 ರ ತಲಪಾಡಿ ಉಚ್ಚಿಲ ಬಳಿ ಲಾರಿ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು ಸ್ಕೂಟರ್ ಸವಾರ ಹಾಗೂ ಸಹಸವಾರರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.



ಗಂಭೀರ ಗಾಯಗೊಂಡ ಇಬ್ಬರು ಸ್ಕೂಟರ್ ಸವಾರರು ಕೇರಳ ಮೂಲದವರಾಗಿದ್ದು ಆ ಪೈಕಿ ಒಬ್ಬರು ಮಂಜೇಶ್ವರ ನಿವಾಸಿ ಪ್ರದೀಪ್ ಎಂದು ಮಾಹಿತಿ ಲಭಿಸಿದೆ.
ಈ ಬಗ್ಗೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.