ಬೆಂಗಳೂರು, ಜೂ 12: ಸಮ್ಮಿಶ್ರ ಸರ್ಕಾರದಲ್ಲಿ ಉದ್ಬವಿಸಿದ್ದ ಬಿಕ್ಕಟ್ಟು ಶಮನವಾಯಿತು ಎಂದುಕೊಂಡಾಗಲೇ, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅವರ ಕೌಟುಂಬಿಕ ಕಲಹದ ಎದುರಾದಂತಾಗಿದೆ. ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡರ ಕುಟುಂಬದಲ್ಲಿ ರಾಮನಗರ ಉಪಚುನಾವಣೆಯ ಸಂಬಂಧ ಭಿನ್ನಭಿಪ್ರಾಯ ತಲೆದೋರಿದ್ದು, ಇದನ್ನು ಹೇಗೆ ಬಗೆಹರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
ಕಮಾರಸ್ವಾಮಿ ಚೆನ್ನಪಟ್ಟನ್ಣ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ ಬಳಿಕ ರಾಮನಗರಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಕಾರಣ ರಾಮನಗರ ಹಿಂದಿನಿಂದಲೂ ಕುಮಾರಸ್ವಾಮಿಯವರ ಹಿಡಿತದ ಕ್ಷೇತ್ರವಾಗಿದ್ದು, ಇದೀಗ ಮತ್ತೆ ಅವರ ಕುಟುಂಬದ ಸದಸ್ಯರನ್ನೇ ಸ್ಪರ್ಧೆಗೆ ಇಳಿಸಬೇಕು ಎಂಬ ಪ್ರಯತ್ನ ಆರಂಭವಾಗಿದೆ. ಈ ನಿಟ್ಟಿನಲ್ಲಿ ಅನಿತಾ ಅಥವಾ ಅವರ ಪುತ್ರ ನಿಖಿಲ್ ಇವರಲ್ಲಿ ಯಾರಾದರೊಬ್ಬರು ಸ್ಪರ್ಧಿಸಬೇಕು ಎಂದು ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಅವರ ಅಭಿಪ್ರಾಯವಾಗಿತ್ತು.
ಆದರೆ ಇದೀಗ ಹೊಸ ಸಮಸ್ಯೆ ಹುಟ್ಟಿಕೊಂಡಿದೆ. ಕಾರಣ ವಿಧಾನ ಸಭೆ ಚುನಾವಣೆ ವೇಳೆ ;ದೇವೇಗೌಡರ ಕುಟುಂಬದಿಂದ ಕುಮಾರಸ್ವಾಮಿ ಮತ್ತು ರೇವಣ್ಣ ಮಾತ್ರ ಸ್ಪರ್ಧಿಸುವುದು ಎಂಬ ನಿರ್ಣಾಯವಾಗಿತ್ತು. ರೇವಣ್ಣ ಪುತ್ರ ಪ್ರಜ್ವಲ್ ಸ್ವರ್ಧೆಗೆ ಕುಟುಂಬ ಮಾತ್ರವಲ್ಲದೇ ರಾಜರಾಜೇಶ್ವರಿ ನಗರದ ಕಾರ್ಯಕರ್ತರಲ್ಲೂ ಒತ್ತಾಯವಿತ್ತು. ಈ ಸಂದರ್ಭ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿ ಪ್ರಜ್ವಲ್ ರಾಜಕೀಯ ಪ್ರವೇಶಕ್ಕೆ ಇದು ಸಕಾಲವಲ್ಲ ಎಂದಿದ್ದರು. ಕೆಲ ದಿನಗಳ ಚರ್ಚೆ ಬಳಿಕ ಗೌಡರೇ ಪ್ರಜ್ವಲ್ ಸ್ವರ್ಧೆ ವಿಚಾರಕ್ಕೆ ಪೂರ್ಣ ವಿರಾಮ ಹಾಕಿದ್ದರು.
ಇದೀಗ ರಾಮನಗರ ಚುನಾವಣೆಯಲ್ಲಿ ಅನಿತಾ ಅಥವಾ ನಿಖಿಲ್ ಸ್ವರ್ಧೆ ವಿಚಾರ ಕುಟುಂಬದಲ್ಲಿ ಚರ್ಚೆಗೆ ಬರುತ್ತಿದ್ದಂತೆ ಭವಾನಿ ವಿರೋಧ ವ್ಯಕ್ತಪಡಿಸುತ್ತಾರೆ ಎನ್ನಲಾಗಿದೆ. ಹೀಗಾಗಿ ದೇವೇಗೌಡರು ಒತ್ತಡಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಚೆನ್ನಪಟ್ಟಣದಲ್ಲಿ ಸೋಲುಂಡ ಸಿ.ಪಿ ಯೋಗೇಶ್ವರ್ ಅವರೇ ರಾಮನಗರದಲ್ಲಿ ಸ್ವರ್ಧೆಗೆ ಇಳಿದಿರುವುದರಿಂದ ಎಲ್ಲವೂ ಕಗ್ಗಂಟಾಗಿ ಪರಿಣಮಿಸಿದೆ.