ಕಾಸರಗೋಡು, ಜೂ 12: ವೃದ್ಧೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ಚಿನ್ನಾಭರಣ, ನಗದು ದರೋಡೆಗೈದ ಘಟನೆ ಕಾಸರಗೋಡಿನಲ್ಲಿ ವೆಳ್ಳಿಕೋತ್ ಎಂಬಲ್ಲಿ ನಡೆದಿದೆ. ವೆಳ್ಳಿಕೋತ್ ನಲ್ಲಿ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಓಮನಾ ಮನೆಯಲ್ಲಿ ಒಬ್ಬರೇ ಇದ್ದಾಗ ಈ ದುಷ್ಕೃತ್ಯ ನಡೆಸಿದ್ದಾರೆ. ಮನೆಯ ಹಿಂಬದಿ ಬಾಗಿಲು ಮುರಿದು ಒಳ ಪ್ರವೇಶಿಸಿದ ಖದೀಮರು, ಒಮನಾ ಅವರನ್ನು ಕೈ ಕಾಲು ಕಟ್ಟಿ ಹಾಕಿ ಬೆದರಿಸಿ ಒಂಬತ್ತು ಪವನ್ ಚಿನ್ನಾಭರಣ ಹಾಗೂ ನಗದು ದರೋಡೆ ನಡೆಸಿದ್ದಾರೆ.
ಘಟನೆ ಬಗ್ಗೆ ದೂರೂ ದಾಖಲಾಗಿದ್ದು, ಕಾಞ೦ಗಾಡ್ ನ ಡಿ ವೈ ಎಸ್ ಪಿ ದಾಮೋದರನ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿಯನ್ನು ನೀಡಿ ಪರಿಶಿಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.