ಮಂಗಳೂರು, ಡಿ.07 (DaijiworldNews/HR): ಗೋಡೆಯಲ್ಲಿ ದೇಶದ್ರೋಹದ ಬರಹ ಬರೆದವರು ಇತ್ತೀಚೆಗೆ ಸುದ್ದಿಯಲಿದ್ದಾರೆ. ಆದರೆ ಇಲ್ಲೋರ್ವ ಯುವಕ ಗೋಡೆಯಲ್ಲಿ ನಮ್ಮ ಸಂಸ್ಕೃತಿಯ ಚಿತ್ರಕಲೆಯನ್ನು ಬಿಡಿಸುವ ಮೂಲಕ ಸುದ್ದಿಯಾಗಿದ್ದಾನೆ.








ಮಂಗಳೂರಿನಲ್ಲಿ ದೇಶ ವಿರೋಧಿ ಕುರಿತಾದ ಗೋಡೆ ಬರಹಗಳು ಸುದ್ದಿಯಾಗುತ್ತಿದ್ದು, ನಾಡಿನ ಸಾರ್ವಭೌಮತೆಯನ್ನು ಕೆಡಿಸುವ, ಶಾಂತಿಗೆ ಧಕ್ಕೆ ತರುವ ಕೆಲಸವನ್ನು ಕೆಲವೊಂದು ಕಿಡಿಗೇಡಿಗಳು ಮಾಡುತ್ತಿದ್ದರೆ, ಇತ್ತ ನಮ್ಮ ನಾಡಿನ ಸೊಬಗನ್ನು ಇಲ್ಲಿನ ಕಲೆಯನ್ನು ಗೋಡೆಯ ಮೂಲಕ ಸುಂದರವಾಗಿ ಚಿತ್ರಿಸುವ ಕೆಲಸವೂ ನಡೆಯುತ್ತಿದೆ. ಹೀಗಾಗಿ ಶಾಂತಿ ಕೆಡಿಸಲು ಪ್ರಯತ್ನಿಸುವವರನ್ನು ನೆಗನೆಟ್ ಮಾಡಿ ಶಾಂತಿ ಕಾಪಾಡಲು ಪ್ರಯತ್ನಿಸುವವರನ್ನು ಹೈಲೈಟ್ ಮಾಡೋಣ.
ಅಶೋಕ್ ನಗರದಿಂದ ಹೈಗೆಬೈಲ್ಗೆ ತೆರಳುವ ಗುರುಂಪೆ ರಸ್ತೆಯಲ್ಲಿರುವ ಖಾಸಗಿ ಅಪಾರ್ಟ್ಮೆಂಟ್ ಗೋಡೆಯೊಂದರಲ್ಲಿ ಶಿವ, ಹುಲಿ, ಶಿವಾಜಿ ಮಹಾರಾಜ್, ಕಥಕ್ಕಳಿ ನೃತ್ಯ ಪ್ರಕಾರದ ಹಲವಾರು ಚಿತ್ರಗಳು ಗೋಡೆ ಮೇಲೆ ಕಾಣಸಿಗುತ್ತಿದ್ದು, ಈ ಅದ್ಘುತ ಕಲಾಕೃತಿಯ ಹಿಂದಿನ ಕಲಾವಿದ ನಿತೇಶ್.
ನಿತೇಶ್ ಕಳೆದ 8 ವರ್ಷಗಳಿಂದ ಚಿತ್ರಕಲೆಯ ಹವ್ಯಾಸ ಹೊಂದಿದ್ದು, ಲಾಕ್ಡೌನ್ ಸಂದರ್ಭವನ್ನು ಸಂಪೂರ್ಣವಾಗಿ ಬಳಸಿಕೊಂಡು ಗೋಡೆ ಮೇಲೆ ಚಿತ್ರ ಬಿಡಿಸೋದರಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಕೇರಳ, ಬೆಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರಗಳನ್ನು ಬಿಡಿಸಿ ಸೈ ಎಣಿಸಿಕೊಂಡಿದ್ದಾರೆ.