ಬೆಳ್ತಂಗಡಿ,ಡಿ. 07 (DaijiworldNews/HR) : ಮನೆಯ ಮಹಡಿ ಹತ್ತುತ್ತಿದ್ದ ಸಂಧರ್ಭದಲ್ಲಿ ಆಕಸ್ಮಿಕವಾಗಿ ಏಣಿಯಿಂದ ಕಾಲುಜಾರಿ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ ಎಸ್ಸೆಸ್ಸೆಫ್ ಉಳ್ತೂರು ಶಾಖೆಯ ಕಾರ್ಯಕರ್ತ ಸುಲೈಮಾನ್ ಪುಲ್ಲಾಯ(34) ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸುಲೈಮಾನ್ ಅವರು ಅಬೂಬಕ್ಕರ್ ಮತ್ತು ಮರಿಯಮ್ಮದಂಪತಿಯ ಹಿರಿಯ ಪುತ್ರರಾಗಿದ್ದು, ಕೃಷಿತೋಟಗಳನ್ನು ವಹಿಸಿಕೊಂಡು ನಡೆಸುವ ಕೆಲಸವನ್ನು ಮಾಡುತ್ತಿದ್ದರು.
ಮೃತರು ತಂದೆ ತಾಯಿ ಮತ್ತು ಮೂವರು ಸಹೋದರರು, ನಾಲ್ವರು ಸಹೋದರಿಯರು, ಪತ್ನಿ ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆಂದು ತಿಳಿದು ಬಂದಿದೆ.