ಕಾಸರಗೋಡು, ಡಿ.08 (DaijiworldNews/MB) : ಡಿ.14 ರಂದು ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ 1409 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. 8527 ಸಿಬಂದಿಗಳನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ.

ಮತಗಟ್ಟೆಗಳಿಗೆ ಸಾಮಗ್ರಿ ವಿತರಣೆಗೆ ಎಂಟು ಕೇಂದ್ರಗಳನ್ನು ತೆರೆಯಲಾಗಿದೆ. ಡಿ.13 ರಂದು ಬೆಳಿಗ್ಗೆ ಎಂಟು ಗಂಟೆಯಿಂದ ಸಾಮಾಗ್ರಿಗಳ ವಿತರಣೆ ಆರಂಭಗೊಳ್ಳಲಿದೆ.
ಮಂಜೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಮತಗಟ್ಟೆಗಳಿಗೆ ಕುಂಬಳೆ ಹಯರ್ ಸೆಕೆಂಡರಿ ಶಾಲೆ, ಕಾಸರಗೋಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಮತಗಟ್ಟೆಗಳಿಗೆ ಕಾಸರಗೋಡು ಸರಕಾರಿ ಕಾಲೇಜು, ಕಾರಡ್ಕ ಬ್ಲಾಕ್ ಬೋವಿಕ್ಕಾನ ಶಾಲೆ, ನೀಲೇಶ್ವರ ನಗರಸಭೆ ಪಡನ್ನಕ್ಕಾಡ, ನೆಹರೂ ಕಾಲೇಜು, ನೀಲೇಶ್ವರ ನಗರಸಭೆ ನೀಲೇಶ್ವರ ಜವಾಹರ್ ಶಾಲೆ, ಪರಪ್ಪ ಬ್ಲಾಕ್ ಪರಪ್ಪ ಜಿವಿಎಚ್ಎಸ್ ಶಾಲೆ, ಕಾಞಂಗಾಡ್, ನಗರ ಸಭೆ ವ್ಯಾಪ್ತಿಯ ಮತಗಟ್ಟೆಗಳಿಗೆ ದುರ್ಗಾ ಹಯರ್ ಸೆಕೆಂಡರಿ ಶಾಲೆಯಲ್ಲಿ ಸಾಮಾಗ್ರಿ ವಿತರಿಸಲಾಗುವುದು.