ಮಂಗಳೂರು, ಡಿ.08 (DaijiworldNews/MB) : 'ಶ್ರೀ ರಕ್ಷಾ' ದೋಣಿ ದುರಂತ ಪ್ರಕರಣದಲ್ಲಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಕಸಬಾ ಬೆಂಗ್ರೆ ಮೂಲದ ಮೀನುಗಾರ ಅನ್ಸಾರ್ (31) ದುರಂತ ನಡೆದು ಒಂದು ವಾರ ಕಳೆದರೂ ಪತ್ತೆಯಾಗಿಲ್ಲ.

ಸೋಮವಾರ ಡಿಸೆಂಬರ್ 7 ರಂದು ನಡೆದ ಶೋಧ ಕಾರ್ಯಾಚರಣೆಯಲ್ಲೂ ಮೀನುಗಾರ ಅನ್ಸಾರ್ರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಈಗಾಗಲೇ ಕಾಣೆಯಾದ ಅನ್ಸಾರ್ ಅವರ ಕುಟುಂಬಗಳಿಗೆ ಮತ್ತು ಶವವಾಗಿ ಪತ್ತೆಯಾದ ಇತರ ಐವರು ಮೀನುಗಾರರ ಕುಟುಂಬಕ್ಕೆ ತಲಾ ಆರು ಲಕ್ಷ ರೂ.ಗಳ ಪರಿಹಾರವನ್ನು ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಈ ಬಗ್ಗೆ ಮಾತನಾಡಿದ ಮೀನುಗಾರಿಕಾ ಇಲಾಖೆಯ ಹಿರಿಯ ಉಪನಿರ್ದೇಶಕ ಪಾರ್ಶ್ವನಾಥ್, ನಾಪತ್ತೆಯಾದವರ ಕುಟುಂಬಗಳಿಗೆ ವಿಪತ್ತು ಪರಿಹಾರ ನಿಧಿಯಿಂದ ಆರು ಲಕ್ಷ ರೂಪಾಯಿಗಳನ್ನು ವಿತರಿಸಲು ಅವಕಾಶವಿದೆ. ಕುಟುಂಬ ಸದಸ್ಯರು ಬಾಂಡ್ ಅನ್ನು ಕಾರ್ಯಗತಗೊಳಿಸಿದ ನಂತರ ಪರಿಹಾರದ ಮೊತ್ತವನ್ನು ವಿತರಿಸಲಾಗುತ್ತದೆ. ಆ ಬಳಿಕ ವ್ಯಕ್ತಿಯು ಪತ್ತೆಯಾದರೆ ಪರಿಹಾರವನ್ನು ಮರುಪಾವತಿಸುವ ಪ್ರಯತ್ನ ಅವರು ನಡೆಸಲಿದ್ದಾರೆ ಎಂದು ತಿಳಿಸಿದರು.