ಮಂಗಳೂರು, ಡಿ.08 (DaijiworldNews/HR): ಇತ್ತೀಚೆಗೆ ಬಿಜೈನ ಅಪಾರ್ಟ್ಮೆಂಟ್ನ ಗೋಡೆಯಲ್ಲಿ ಹಾಗೂ ನಗರದ ಕೋರ್ಟ್ ರೋಡ್ನಲ್ಲಿ ಕೋರ್ಟ್ಗೆ ಸಮೀಪವಾಗಿರುವ ಕೋರ್ಟ್ ಪ್ರಿಮಿಸಸ್ನ ಹಳೇ ಪೊಲೀಸ್ ಔಟ್ ಪೋಸ್ಟ್ನ ಗೋಡೆಯ ಮೇಲೆ ಪ್ರಚೋದನಕಾರಿ ಬರಹಗಳಿಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಪೊಲೀಸರು ಮೂರನೇ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಅಹಮ್ಮದ್ (21) ಅವರನ್ನು ಈಗಾಗಲೇ ಬಂಧಿಸಿದ್ದು, ಮೂರನೇ ಆರೋಪಿ ಶಾರೀಕ್ ಅವನ ಚಿಕ್ಕಪ್ಪ ಎಂದು ಹೇಳಲಾಗುತ್ತಿದ್ದು, ಈ ಕೃತ್ಯ ಎಸಗಲು ಶಾರಿಕ್ಗೆ ಉತ್ತೇಜನ ನೀಡಿದ ಎನ್ನಲಾಗಿದೆ. ಆತ ಕೂಡ ತೀರ್ಥಹಳ್ಳಿಯಲ್ಲಿ ಮಳಿಗೆ ವ್ಯಾಪಾರ ಮತ್ತು ಬಟ್ಟೆಗಳನ್ನು ಮಾರಾಟ ಮಾಡಲು ಮನೆ ಮನೆಗೆ ತೆರಳುತ್ತಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
ಇನ್ನುನ್ಯಾಯಾಲಯದ ಆದೇಶದಂತೆ, ಬಂಧಿತ ಆರೋಪಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಇಬ್ಬರಿಗೂ ನೆಗೆಟಿವ್ ವರದಿ ಬಂದಿದೆ. ಆದ್ದರಿಂದ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸರು ಮತ್ತೆ ತಮ್ಮ ಕಸ್ಟಡಿಗೆ ಕೋರಲಿದ್ದಾರೆ.