ಕಾರ್ಕಳ, ಡಿ. 08 (DaijiworldNews/SM): ತಾಲೂಕಿನ ಒಟ್ಟು 27 ಗ್ರಾಮ ಪಂಚಾಯತ್ಗಳಿಗೆ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದ್ದು, ಒಟ್ಟು 145 ಕ್ಷೇತ್ರ ಗಳಿದ್ದು, 399 ಸದಸ್ಯರು ಚುನಾಯಿತರಾಗಲಿದ್ದಾರೆ. ಆಗ್ಸಿಲರಿ 43 ಸ್ಭೆರಿದಂತೆ ಒಟ್ಟು 193 ಮಟ್ಟಗಟ್ಟೆಗಳಿದ್ದು, ಅದರಲ್ಲಿ 149 ಸಾಮಾನ್ಯ, 20 ಸೂಕ್ಷ್ಮ, 24 ನಕ್ಸಲ್ ಭಾದಿತ ಮತಗಟ್ಟೆಗಳು ಒಳಗೊಂಡಿದೆ. ಇದುವರೆಗಿನ ಮಾಹಿತಿಯಂತೆ 62,947 ಗಂಡಸರು, 69,012 ಮಹಿಳೆಯರು ಮತದಾರರು ಒಳಗೊಂಡಿದ್ದಾರೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.

ತಾಲೂಕು ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 27 ಚುನಣಾವಣಾಧಿಕಾರಿಗಳು, 29 ಸಹಾಯಕ ಚುನಾವಣಾಧಿಕಾರಿಗಳು ನೇಮಕಗೊಂಡಿದ್ದಾರೆ. ಇವಿಎಂ ಮತಯಂತ್ರ ಬಳಸದೇ ಇರುವುದರಿಂದ ಮತಪೆಟ್ಟಿಗೆಗಳನ್ನು ಸ್ವಚ್ಛಗೊಳಿಸಿ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. 193 ಮತಗಟ್ಟೆಗೆ ಹಾಗೂ ಮೀಸಲು ಸಿಬ್ಬಂದಿ ಸಹಿತವಾಗಿ ಪಿಆರ್ಒ 235ಎಪಿಆರ್ಪಿ 231 ಪಿಒ 487 ಸೇ ರಿದಂತೆ ಒಟ್ಟು 983 ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ. ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಮಸರಿಂಗ್ ಡೀಮಸರಿಂಗ್ , ಭದ್ರತಾ ಕೊಠಡಿ, ಮತ ಎಣಿಕೆ ಕೇಂದ್ರವಾಗಿದೆ ಎಂದರು.