ಚಿತ್ರ - ದಯಾನಂದ್ ಕುಕ್ಕಾಜೆ
ಮಂಗಳೂರು, ಡಿ.09 (DaijiworldNews/MB) : ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಚಂಡಮಾರುತದ ಪರಿಣಾಮದಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಡಿಸೆಂಬರ್ 8 ರ ಮಂಗಳವಾರ ಸಂಜೆ ಗುಡುಗು ಮತ್ತು ಮಿಂಚಿನೊಂದಿಗೆ ಭಾರಿ ಮಳೆಯಾಗಿದೆ.








ಪ್ರಸ್ತುತ ಆಗ್ನೇಯ ಅರಬಿ ಸಮುದ್ರ ಮತ್ತು ಹಿಂದೂ ಮಹಾಸಾಗರ ನಡುವಿನ ಸಮಭಾಜಕದ ಬಳಿ ಸಮುದ್ರ ಮಟ್ಟದಿಂದ 3.1 ಕಿ.ಮೀ ದೂರದಲ್ಲಿ ಚಂಡಮಾರುತವಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಮಳೆ ಸುರಿದಿದೆ. ಹವಾಮಾನ ಇಲಾಖೆಯ ಪ್ರಕಾರ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಮೂಡುಬಿದಿರೆ, ಉಡುಪಿ, ಕಾರ್ಕಳ, ಹೆಬ್ರಿ ಮತ್ತು ಪಡುಬಿದ್ರಿಗಳಲ್ಲಿ ಉತ್ತಮ ಪ್ರಮಾಣದ ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಎನ್ಡಿಎಂಸಿ) ನ ಮಾಹಿತಿ ಪ್ರಕಾರ ಮೂಡುಬಿದಿರೆಯಲ್ಲಿ 69.5 ಮಿ.ಮೀ ಮಳೆ ಸುರಿದ್ದು ಇದು ಮಂಗಳವಾರ ಸುರಿದ ಅತಿ ಹೆಚ್ಚು ಪ್ರಮಾಣದ ಮಳೆಯಾಗಿದೆ.
ಹವಾಮಾನವು ಹಗಲಿನಲ್ಲಿ ಬಿಸಿಲಿನಿಂದ ಕೂಡಿದ್ದು ಕೆಲವು ಪ್ರದೇಶಗಳಲ್ಲಿ ಸಂಜೆ ಅರ್ಧ ಗಂಟೆಗಳ ಕಾಲ ಮಳೆಯಾಗಿದೆ. ತಡರಾತ್ರಿಯವರೆಗೆ ಅನೇಕ ಪ್ರದೇಶಗಳಿಗೆ ವಿದ್ಯುತ್ ಕಡಿತಗೊಳಿಸಲಾಗಿದೆ.
ಇನ್ನು ಸುಳ್ಯದಲ್ಲಿ ಕೃಷಿಕರು ಬೆಳೆದ ಶೇಂಗಗಳನ್ನು ಒಣಗಳು ಹಾಕಿದ್ದು ಈ ದಿಢೀರ್ ಮಳೆಯಿಂದಾಗಿ ತೊಂದರೆಗೆ ಒಳಗಾದರು.