ಕಾಸರಗೋಡು, ಡಿ.09 (DaijiworldNews/MB) : ಯುವತಿಯನ್ನು ವಂಚಿಸಿ ಬೆದರಿಸಿ ಲಕ್ಷಾಂತರ ರೂ. ಲಪಟಾಯಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೊಲ್ಲಂಪಾಡಿಯ ಅಬ್ದುಲ್ ಖಾದರ್ (31) ಎಂದು ಗುರುತಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯ ಫೋಟೋವನ್ನು ಸಾಮಾಜಿಕಜಾಲತಾಣದ ಮೂಲಕ ಬಹಿರಂಗಪಡಿಸುವುದಾಗಿ ಬೆದರಿಸಿದ್ದು, 25 ಲಕ್ಷ ರೂ. ಗೆ ಬೇಡಿಕೆ ಇಟ್ಟಿರುವುದಾಗಿ ಯುವತಿ ದೂರು ನೀಡಿದ್ದಳು.