ಹಾಲಾಡಿ, ಡಿ.09 (DaijiworldNews/PY): ಸೇತುವೆಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೆಎಂಎಫ್ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ (60) ಮೃತಪಟ್ಟ ಘಟನೆ ಹಾಲಾಡಿಯಲ್ಲಿ ಡಿ.9ರ ಬುಧವಾರದಂದು ನಡೆದಿದೆ.




ಹಾಲಾಡಿಯಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ಶಂಕರನಾರಾಯಣಕ್ಕೆ ವಾಪಾಸ್ಸಾಗುತ್ತಿದ್ದ ವೇಳೆ ಹಾಲಾಡಿಯಲ್ಲಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ರಾಜೀವ ಶೆಟ್ಟಿ ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆತರುವ ಸಂದರ್ಭ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಪ್ರಸ್ತುತ ಕೆಎಂಎಫ್ನ ನಿರ್ದೇಶಕರಾಗಿದ್ದ ಹದ್ದೂರು ರಾಜೀವ ಶೆಟ್ಟಿ ಅವರು ಶಂಕರನಾರಾಯಣ ತಾಲೂಕು ಪಂಚಾಯತ್ನ ಸದಸ್ಯರಾಗಿದ್ದರು.
ಘಟನೆಯ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜೀವ ಶೆಟ್ಟಿ ಅವರು ಪ್ರಶ್ಸತಿ ಪುರಸ್ಕೃತ ಪ್ರಗತಿಪರ ಕೃಷಿಕರಾಗಿದ್ದು, ಅಲ್ಲದೇ ಹೈನುಗಾರಿಕೆಯಲ್ಲಿಯೂ ಉತ್ತಮ ಸಾಧನಗೈದಿದ್ದರು. ಇವರು 35 ವರ್ಷಗಳಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಇವರಿಗೆ ಸಬ್ಲಾಡಿ ಸೀನಪ್ಪ ಶೆಟ್ಟಿ ಕೃಷಿ ಸಾಧಕ ಪ್ರಶಸ್ತಿ ಹಾಗೂ ಕುಂದಾಪುರ ತಾಲೂಕು ಉತ್ತಮ ಕೃಷಿಕ ಪ್ರಶಸ್ತಿಗಳು ಲಭಿಸಿವೆ.
ರಾಜೀವ ಶೆಟ್ಟಿ ಅವರು, ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ, ಬೈಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಇವರು ಶಂಕರನಾರಾಯಣ ಮಂಡಲ ಪಂಚಾಯತ್ ಅಧ್ಯಕ್ಷರಾಗಿದ್ದು, ಮಾಜಿ ಸದಸ್ಯರಾಗಿದ್ದು, ಕುಂದಾಪುರ ತಾ. ಪಂ. ಸದಸ್ಯರಾಗಿದ್ದು, ಬಿಜೆಪಿ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು.