ಮಂಗಳೂರು, ಡಿ.09 (DaijiworldNews/PY): ಮಂಗಳೂರು ಮಿಲಾಗ್ರಿಸ್ ಕಾಲೇಜಿನ ಆತಿಥ್ಯ ವಿಜ್ಞಾನ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ (ಐಕ್ಯೂಎಸಿ) ದ ವತಿಯಿಂದ 'ಫೆಲಿಜ್ ನವಿದಾದ್' ಕೇಕ್ ಮಿಶ್ರಣ ಮತ್ತು ಕ್ರಿಸ್ಮಸ್ ಹಬ್ಬವನ್ನು ಡಿ.9ರ ಬುಧವಾರದಂದು ಆಚರಿಸಲಾಯಿತು.































ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದಾಯ್ಜಿವರ್ಲ್ಡ್ ಮೀಡಿಯಾ ಪ್ರೈ.ಲಿ.ನ ವಾಣಿಜ್ಯ ಪ್ರಬಂಧಕ ಪ್ರವೀಣ್ ತಾವ್ರೊ ಹಾಗೂ ಗೌರವಾನ್ವಿತ ಅತಿಥಿಯಾಗಿ ಹೊಟೇಲ್ ಗೋಲ್ಡ್ ಫಿಂಚ್ ಇದರ ಮಾರಾಟ ವ್ಯವಸ್ಥಾಪಕ ಹ್ಯಾಡ್ಲಿ ಗೊನ್ಸಾಲ್ವಿಸ್ ಭಾಗವಹಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಪ್ರವೀಣ್ ತಾವ್ರೊ ಅವರು, "ಕೇಕ್ ಮಿಶ್ರಣದಲ್ಲಿ ಹೇಗೆ ಸಿಹಿ, ಕಹಿ, ಹುಳಿ ಇರುತ್ತದೆಯೋ ಹಾಗೆಯೇ ಮನುಷ್ಯನ ಜೀವನ ಕೂಡಾ ಸುಖ-ದುಃಖದಿಂದ ಕೂಡಿರುತ್ತದೆ. ಕ್ರಿಸ್ಮಸ್ ಹಬ್ಬವು ಸುಖ ಶಾಂತಿಯನ್ನು ಕರುಣಿಸಲಿ" ಎಂದು ಹಾರೈಸಿದರು.
ಗೌರವಾನ್ವಿತ ಅತಿಥಿ ಹ್ಯಾಡ್ಲಿ ಗೊನ್ಸಾಲ್ವಿಸ್ ಅವರು ಮಾತನಾಡಿ, ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳನ್ನು ನೀಡುತ್ತಾ, "ಇಂತಹ ಚಟುವಟಿಕೆಗಳು ಪ್ರತಿವರ್ಷ ಹಮ್ಮಿಕೊಳ್ಳುವಂತಾಗಲಿ" ಎಂದು ಆಶಿಸಿದರು.
ಕಾಲೇಜಿನ ಪ್ರಾಂಶುಪಾಲ ವಂ. ಫಾ. ಮೈಕಲ್ ಸಾಂತುಮಾಯೋರ್ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ನೆರೆದಿದ್ದವರನ್ನು ಸ್ವಾಗತಿಸಿದರು.
ಎಫ್.ಎನ್.ಡಿ ವಿಭಾಗದ ಮುಖ್ಯಸ್ಥೆ ಕು. ಮೇರಿ ಪ್ರಿಸಿಲ್ಲಾ ಅವರು ಕೇಕ್ ಮಿಶ್ರಣ ಮತ್ತು ತಯಾರಿಕೆಯ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದರು.
ಆತಿಥ್ಯ ವಿಜ್ಞಾನ ವಿಭಾಗದ ಮುಖ್ಯಸ್ಥ ಡೆನ್ಜಿಲ್ ಡಿಕೋಸ್ತಾ ಇವರ ನೇತೃತ್ವದಲ್ಲಿ ಕೇಕ್ ಮಿಶ್ರಣವನ್ನು ನಡೆಸಲಾಯಿತು. ಕಾಲೇಜಿನ ಸಂಗೀತ ವೃಂದ ಕ್ಯಾರಲ್ ಹಾಡುವಿಕೆಯ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಉಪಪ್ರಾಂಶುಪಾಲ ಕ್ಯಾಸಿನ್ ರೊಡ್ರಿಗಸ್ ವಂದನಾರ್ಪಣೆಗೈದರು. ಆತಿಥ್ಯ ವಿಜ್ಞಾನ ವಿಭಾಗದ ಉಪನ್ಯಾಸಕಿ ಕು. ಅಲೆಟ್ ಸಾಂತ್ಮಾಯೆರ್ ಕಾರ್ಯಕ್ರಮ ನಿರೂಪಿಸಿದರು.