ಉಡುಪಿ, ಡಿ.09 (DaijiworldNews/PY): ಬಿಜೆಪಿ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಹಾಗೂ ಉಡುಪಿ ಕ್ಷೇತ್ರದ ಶಾಸಕ ಕೆ. ರಘುಪತಿ ಭಟ್ ಅವರ ಅಭಿವೃದ್ಧಿಯನ್ನು ಬೆಂಬಲಿಸಿ, ನಾಯಕತ್ವವನ್ನು ಮೆಚ್ಚಿ ದಲಿತ ಮುಖಂಡ, ಉಡುಪಿ ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಮೋರ್ಚಾ ಅಧ್ಯಕ್ಷ ಎಸ್. ನಾರಾಯಣ್ ಅವರು ಡಿ.9ರ ಬುಧವಾರದಂದು ಶಾಸಕ ಕೆ. ರಘುಪತಿ ಭಟ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.







ವಾರಂಬಳ್ಳಿ ಗ್ರಾಮದ ಪ್ರಮುಖ ಕಾಂಗ್ರೆಸ್ ಮುಖಂಡರಾಗಿದ್ದ ಎಸ್. ನಾರಾಯಣ್ ಅವರು ವಾರಂಬಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುತ್ತಾರೆ. ಶಾಸಕ ಕೆ. ರಘುಪತಿ ಭಟ್ ಅವರು ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಇದೇ ರೀತಿ ಬಿಜೆಪಿ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಹಾಗೂ ಕೇಂದ್ರಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿಯನ್ನು ಬೆಂಬಲಿಸಿ ವಾರಂಬಳ್ಳಿ ಗ್ರಾಮ ಪಂಚಾಯತ್ನಲ್ಲಿ 2 ಬಾರಿ ಕಾಂಗ್ರೆಸ್ನಿಂದ ಸದಸ್ಯರಾಗಿದ್ದು, ಅಧ್ಯಕ್ಷರಾಗಿದ್ದ ನಿತ್ಯಾನಂದ ಬಿ.ಆರ್, ವಾರಂಬಳ್ಳಿ ಪಂಚಾಯತ್ನಲ್ಲಿ ಕಾಂಗ್ರೆಸ್ ನಿಂದ 5 ಬಾರಿ ಸದಸ್ಯರಾಗಿ, ಪಂಚಾಯತ್ ಅಧ್ಯಕ್ಷರಾಗಿದ್ದ ನವೀನ್ ಚಂದ್ರ ನಾಯಕ್ ಸೇರಿದಂತೆ ವಾರಂಬಳ್ಳಿ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಮಾಜಿ ಸದಸ್ಯರುಗಳಾದ ರಾಜು ಸಾಲ್ಯಾನ್, ದೇವಾನಂದ, ಕ್ರಿಸ್ತೀನ್, ಗೋಪಾಲ ದೇವಾಡಿಗ, ಕವಿತಾ, ಹೇಮಾ ಶೆಟ್ಟಿಗಾರ್, ಸದಾನಂದ ಪೂಜಾರಿ, ಗುಲಾಬಿ ಕುಂದರ್ ಮತ್ತು ಸುರೇಶ್ ಬಿರ್ತಿ ಸೇರಿದಂತೆ ಒಟ್ಟು 12 ಮಂದಿ ಕಾಂಗ್ರೆಸ್ ಜನ ಪ್ರತಿನಿಧಿಗಳು ಶಾಸಕ ಕೆ. ರಘುಪತಿ ಭಟ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅಶೋಕ್ ಹೇರೂರು, ವಾರಂಬಳ್ಳಿ ಗ್ರಾಮ ಪಂಚಾಯತ್ ಚುನಾವಣಾ ಉಸ್ತುವಾರಿ ಸುಧೀರ್ ಶೆಟ್ಟಿ, ಪಕ್ಷದ ಮುಖಂಡ ನಿಶಾನ್ ರೈ, ಬಿರ್ತಿ ರಾಜೇಶ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಕುಸುಮ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಉಮೇಶ್ ನಾಯ್ಕ್, ಜಿಲ್ಲಾ ಕಾರ್ಯಕಾರಣಿ ಸದಸ್ಯ ನಾಗವೇಣಿ, ಬ್ರಹ್ಮಾವರ ಮಹಾಶಕ್ತಿ ಕೇಂದ್ರದ ಸದಸ್ಯರಾದ ಉಲ್ಲಾಸ್ ವಾರಂಬಳ್ಳಿ ಮತ್ತು ಹರೀಶ್ ಶೆಟ್ಟಿ ಚೇರ್ಕಾಡಿ ಹಾಗೂ ಪಕ್ಷದ ಹಿರಿಯರು ಕಾರ್ಯಕರ್ತರು ಉಪಸ್ಥಿತರಿದ್ದರು.