ಕಾಸರಗೋಡು, ಡಿ.10 (DaijiworldNews/PY): ಪೆರಿಯ ಕೇಂದ್ರ ವಿಶ್ವ ವಿದ್ಯಾನಿಲಯದ ಲ್ಯಾಬ್ ಅಸಿಸ್ಟೆಂಟ್ ಓರ್ವಳ ಮೃತದೇಹ ಹೊಳೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಕಾಞಂಗಾಡ್ ಸೌತ್ನ ಶರತ್ ಮ್ಯಾಥ್ಯೂ ಅವರ ಪತ್ನಿ ಜೆಸ್ನಾ ಬೇಬಿ (26) ಮೃತಪಟ್ಟವರು .
ಡಿ.9ರ ಬುಧವಾರ ಸಂಜೆ ನೀಲೇಶ್ವರ ಓರ್ಚಾ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆದರೆ, ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಮೃತದೇಹದ ಫೋಟೋ ಗಮನಿಸಿದ ಸಂಬಂಧಿಕರು ಮೃತದೇಹದ ಗುರುತು ಪತ್ತೆಹಚ್ಚಿದ್ದಾರೆ.
ಬುಧವಾರ ಸಂಜೆ 4.30 ರ ಸುಮಾರಿಗೆ ಮೀನುಗಾರರು ಹೊಳೆಯಲ್ಲಿ ಮೃತದೇಹವನ್ನು ಗಮನಿಸಿ ನೀಲೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಈಕೆ ಜಿಯೋಲಾಜಿ ಲ್ಯಾಬ್ಗೆ ಕೆಲ ಸಮಯದ ಹಿಂದೆ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಘಟನೆಗೆ ಕಾರಣ ತಿಳಿದುಬಂದಿಲ್ಲ. ನೀಲೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.