ಮಂಗಳೂರು ಜೂನ್ 13 : ರಂಜಾನ್ ಪ್ರಾರ್ಥನಾ ದಿನದಂದು ಜೂನ್ 15 ಅಥವಾ 16 ರಂದು ಮುಸ್ಲಿಂ ಧರ್ಮಿಯವರು ರಂಜಾನ್ ಹಬ್ಬವನ್ನು ಆಚರಿಸಲಿದ್ದು, ಹಬ್ಬದ ದಿನದಂದು ಬೆಳಿಗ್ಗೆ 7 ಗಂಟೆಯಿಂದ ಬಾವುಟ ಗುಡ್ಡೆ ಈದ್ಗಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ರಂಜಾನ್ ಹಬ್ಬದಂದು ಬೆಳಿಗ್ಗೆ 6.30 ರಿಂದ 10 ಗಂಟೆಯವರೆಗೆ ಬಾವುಟ ಗುಡ್ಡೆಯ ಈದ್ಗಾ ಮಸೀದಿಯಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಬೆಳಿಗ್ಗೆ 6.30 ರಿಂದ ಪ್ರಾರ್ಥನೆ ಮುಗಿದು ಜನರು ಮತ್ತು ವಾಹನಗಳು ತೆರಳುವ ತನಕ ಹಂಪನಕಟ್ಟೆಯಿಂದ ಬಾವುಟಗುಡ್ಡೆಯ ಮುಖಾಂತರ ಡಾ. ಅಂಬೇಡ್ಕರ್ ವೃತ್ತದ ಕಡೆಗೆ ಸಂಚರಿಸಬೇಕಾದ ವಾಹನಗಳು ಕೆ.ಎಸ್.ಆರ್. ರಸ್ತೆಯ ಎಲ್.ಹೆಚ್.ಹೆಚ್. ಮುಖಾಂತರ ಫಳ್ನೀರ್ ರಸ್ತೆಯ ಮೂಲಕ ಸಂಚರಿಸುವುದು.
ಸಿಟಿ ಸೆಂಟರ್ ನಿಂದ ಬಾವುಟಗುಡ್ಡೆ ಕಡೆಗೆ ಬರುವ ರಸ್ತೆ ಹಾಗೂ ಸಿಟಿ ಸೆಂಟರ್ ಪಾರ್ಕಿಂಗ್ನಿಂದ ಬಾವುಟಗುಡ್ಡೆಗೆ ಬರುವ ರಸ್ತೆಗಳಲ್ಲಿ ಬೆಳಿಗ್ಗೆ 6.30 ರಿಂದ 10 ಗಂಟೆಯವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬಾವುಟಗುಡ್ಡೆಯ ನಗರ ಕೇಂದ್ರ ಗ್ರಂಥಾಲಯದಿಂದ ವಿಜಯಾ ಬ್ಯಾಂಕ್ ತನಕ ರಸ್ತೆಯ ಎಡಬದಿ ಮಾತ್ರ ವಾಹನಗಳನ್ನು ತಾತ್ಕಾಲಿಕವಾಗಿ ಪಾರ್ಕ್ ಮಾಡುವುದು.
ಈ ತಾತ್ಕಾಲಿಕ ಅಧಿಸೂಚನೆಯು ಜೂನ್ 15 ಅಥವಾ 16 ರಂದು ಬೆಳಿಗ್ಗೆ 6.30 ರಿಂದ 10 ಗಂಟೆಯವರೆಗೆ ಊರ್ಜಿತದಲ್ಲಿರುತ್ತದೆ.