ಸುಳ್ಯ, ಡಿ. 10 (DaijiworldNews/SM): ಆಸಿಯಾ ಹಾಗೂ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ವಿವಾಹವಾಗಿ ಇದೀಗ ಆಸಿಯಾರನ್ನು ಪತಿ ದೂರ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಆಸಿಯಾ ಧರಣಿ ಮುಂದುವರೆಸಿದ್ದಾರೆ.

ಆಸಿಯಾ ಪತಿಯ ಕುಟುಂಬಕ್ಕೆ ಸೇರಿದ ಚಪ್ಪಲಿ ಅಂಗಡಿಯಲ್ಲಿ ಕಳೆದ ಎರಡು ದಿನಗಗಳಿಂದ ಆಸಿಯಾ ನ್ಯಾಯಕ್ಕಾಗಿ ನಡೆಸುತ್ತಿರುವ ಧರಣಿಗೆ ಬೆಂಬಲವಾಗಿ ಜನ ಸೇರಿದಾಗ ಪೊಲೀಸರುವ ಲಾಠಿ ಬೀಸಿ ಸೇರಿದ ಜನರನ್ನು ಚದುರಿಸಿದ ಘಟನೆ ನಡೆದಿದೆ.
ಸಂಜೆ ಕಟ್ಟಕಾರ್ ಪೂಟ್ವೇರ್ ಎದುರು ಪ್ರತಿಭಟನೆ ನಡೆಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿತ್ತು. ಈ ಕಾರಣದಿಂದ ಜನರು ಕುತೂಹಲ ಭರಿತವಾಗಿ ಸೇರಿದಾಗ ಅವರನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಇನ್ನು ನ್ಯಾಯ ಸಿಗುವ ತನಕ ಧರಣಿ ಕೈಬಿಡುವುದಿಲ್ಲ ಎಂದು ಆಸಿಯಾ ತಿಳಿಸಿದ್ದಾರೆ.