ಕಾಸರಗೋಡು, ಡಿ.11 (DaijiworldNews/MB) : ಹತ್ತು ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಜೀವಾವಧಿ ಸಜೆ ವಿಧಿಸಿ ಕಾಸರಗೋಡು ಪೋಕ್ಸೋ ನ್ಯಾಯಾಲಯ ತೀರ್ಫು ನೀಡಿದೆ.

ಕುಂಬಳೆ ಸುನಾಮಿ ಕಾಲನಿಯ ಮುಹಮ್ಮದ್ ರಿಯಾಜ್ (31) ಶಿಕ್ಷೆಗೊಳಗಾದವನು.
ಕಾಸರಗೋಡು ಪೋಕ್ಸೋ ನ್ಯಾಯಾಲಯವು ಜೀವಾವಧಿ ಶಿಕ್ಷೆ ಅಲ್ಲದೆ 50 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ 6 ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕು.
ಮದ್ರಸ ಅಧ್ಯಾಪಕನಾಗಿದ್ದ ರಿಯಾಜ್ ಎಸಗಿದ ಈ ಕೃತ್ಯ 2015 ರ ಆಗಸ್ಟ್ 8 ರಂದು ಕೃತ್ಯ ಬೆಳಕಿಗೆ ಬಂದಿತ್ತು. ರಾಜಪುರ ಠಾಣಾ ವ್ಯಾಪ್ತಿಯ ಮದ್ರಸದಲ್ಲಿ ಈ ಘಟನೆ ನಡೆದಿತ್ತು. ಕೆಲ ತಿಂಗಳಿನಿಂದ ಈತ ದೌರ್ಜನ್ಯ ನಡೆಸುತ್ತಿದ್ದ ಎಂದು ದೂರು ದಾಖಲಾಗಿತ್ತು.