ಬೆಳ್ತಂಗಡಿ, ಜೂ 14: ಲಕ್ಷಾಂತರರೂ. ವೆಚ್ಚದಕಾಮಗಾರಿಯೊಂದು ಮಳೆಯ ಹೊಡೆತಕ್ಕೆ ಮಣ್ಣುಪಾಲಾದ ವಿದ್ಯಮಾನ ವೇಣೂರು ಸನಿಹ ನಡೆದಿದೆ.
ವೇಣೂರಿನಿಂದ ಕೆಲವೇ ಮೀ. ಹಂತರದ ಪರಪ್ಪು ರಸ್ತೆಗೆ ಹಾಕಲಾದ ಕಾಂಕ್ರಿಟ್ ಕಾಮಗಾರಿ ಮಳೆಗೆ ಕೊಚ್ಚಿ ಹೋಗಿದ್ದು, ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಕೆಲ ಸಮಯಗಳ ಹಿಂದೆಯಷ್ಟೇ ಈ ರಸ್ತೆಗೆ ಭಾರೀ ಪ್ರಮಾಣದಲ್ಲಿ ಮಣ್ಣು ತುಂಬಿಸಿ ದುರಸ್ತಿ ಕಾರ್ಯ ನಡೆಸಲಾಗಿತ್ತು. ಬಳಿಕ ಅದೇ ರಸ್ತೆಗೆ ಮಾಜಿ ಶಾಸಕರ ವಿಶೇಷ ಅನುದಾನದಡಿ ಕಾಂಕ್ರಿಟ್ ನಿರ್ಮಾಣ ಮಾಡಲಾಗಿತ್ತು. ಬಿರುಸಿನಿಂದ ಸುರಿದ ಮುಂಗಾರುಮಳೆಗೆ ಇದೀಗ ರಸ್ತೆಯೇ ಕೊಚ್ಚಿ ಹೋಗಿದ್ದು, ಲಕ್ಷಾಂತರರೂ. ಹಣನೀರು ಪಾಲಾಗಿದೆ. ಮಣ್ಣು ತುಂಬಿಸಿದ ರಸ್ತೆಯನ್ನು ಗಟ್ಟಿಗೊಳಿಸದೆ ಅವೈಜ್ಞಾನಿಕವಾಗಿ ಕಾಂಕ್ರಿಟ್ ಹಾಕಿದ್ದರಿಂದ ಕಾಂಕ್ರಿಟ್ ತುಂಡು ತುಂಡಾಗಿ ಕೊಚ್ಚಿಹೋಗಿರುವುದರಿಂದ ಸಂಪರ್ಕವೇ ಕಡಿತಗೊಂಡಿದೆ.
ಈ ಬಗ್ಗೆ ಇಲ್ಲಿನ ಜಿ.ಪಂ. ಸದಸ್ಯ ಪಿ. ಧರಣೇಂದ್ರಕುಮಾರ್ ಪ್ರತಿಕ್ರಿಯಿಸಿ, ಹೊಸದಾಗಿ ಮಣ್ಣುತುಂಬಿಸಿ ಮಾಡಲಾದ ಪರಪ್ಪುರಸ್ತೆಗೆ ಒಂದು ಮಳೆಗಾಲ ಕಳೆದ ಬಳಿಕ ಕಾಂಕ್ರಿಟ್ ಹಾಕಬಹುದು ಎಂದು ಗುತ್ತಿಗೆದಾರರಿಗೆ ತಿಳಿಸಿದ್ದೆ. ಆದರೆ ಅವಸರದ ಕಾಮಗಾರಿಯಿಂದ ಈ ಅವಗಢ ಸಂಭವಿಸುವಂತಾಗಿದೆ ಎಂದಿದ್ದಾರೆ. ಈ ಬಗ್ಗೆ ವೇಣೂರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ ಅವರನ್ನು ಕೇಳಿದರೆ ರಸ್ತೆ ಕೊಚ್ಚಿಹೋಗಿರುವ ಬಗ್ಗೆ ಮಾಹಿತಿ ಇಲ್ಲವಾಗಿದ್ದು, ಪರಿಶೀಲಿಸುವುದಾಗಿ ತಿಳಿಸಿದ್ದಾರೆ.