ಕಾಸರಗೋಡು, ಡಿ.11 (DaijiworldNews/MB) : ಡಿ. 14 ರಂದು ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆ ಹಿನ್ನಲೆಯಲ್ಲಿ ಮತಯಂತ್ರಗಳನ್ನು ಸಜ್ಜುಗೊಳಿಸುವ ಪ್ರಕ್ರಿಯೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಗುರುವಾರ ನಡೆಯಿತು.



ಎಂಟು ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಮಂಜೇಶ್ವರ, ಕಾಸರಗೋಡು, ಕಾರಡ್ಕ, ಪರಪ್ಪ, ಹೊಸದುರ್ಗ, ನೀಲೇಶ್ವರ, ಪಡನ್ನ ಕ್ಕಾಡ್, ನೀಲೇಶ್ವರದಲ್ಲಿ ಕೇಂದ್ರವಿದ್ದು, ಮತಯಂತ್ರಗಳ ದಾಸ್ತಾನು, ಎಣಿಕಾ ಪ್ರಕ್ರಿಯೆ ಈ ಕೇಂದ್ರಗಳಲ್ಲಿ ನಡೆಯಲಿದೆ.
ಜಿಲ್ಲಾ ಪಂಚಾಯತ್, ಆರು ಬ್ಲಾಕ್, 38 ಗ್ರಾಮ ಪಂಚಾಯತ್ ಹಾಗೂ ಮೂರು ನಗರಸಭೆಗಳಿಗೆ ಚುನಾವಣೆ ನಡೆಯಲಿದೆ.