ಸುಳ್ಯ, ಡಿ.11 (DaijiworldNews/PY): ಅಕ್ರಮವಾಗಿ ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಕುಟ್ಟ ಗ್ರಾಮದ ತಮಿಳರ ರಾಜು (40) ಎಂದು ಗುರುತಿಸಲಾಗಿದೆ.
ಪೊನ್ನಂಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈತ ಕೆಲವು ದಿನಗಳಿಂದ ಕೇರಳ ರಾಜ್ಯದ ಲಾಟರಿ ಟಿಕೆಟ್ಗಳನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಈ ಸಂದರ್ಭ ಪೊಲೀಸರು ಆರೋಪಿಯ ಬಳಿ ಇದ್ದ 52 ಲಾಟರಿ ಟಿಕೆಟ್ಗಳು ಹಾಗೂ 1,770 ನಗದು ಹಣವನ್ನು ವಶಪಡಪಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊನ್ನಂಪೇಟೆಯ ಎಸ್ಐ ಕುಮಾರ ಅವರ, ಮುಂದಾಳುತ್ವದಲ್ಲಿ ಸಿಬ್ಬಂದಿಗಳಾದ ಎಂ ಡಿ ಮನು, ಎಂ.ಎಸ್ ರಂಜಿತ್, ಪ್ರಮೋದ್ ಹಾಗೂ ವಿಶ್ವನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.