ಬೆಂಗಳೂರು, ಜೂ 14 : ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಗೆ ಕೊನೆಗೂ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಗುರುವಾರಕ್ಕೆ ತೀರ್ಪನ್ನು ಕಾಯ್ದಿರಿಸಿದ್ದ, ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ , ನಲಪಾಡ್ ಗೆ ಜಾಮೀನು ಮಂಜೂರು ಮಾಡಿದ್ದಾರೆ. 2 ಲಕ್ಷ ಬಾಂಡ್ ಇಬ್ಬರ ಶ್ಯೂರಿಟಿ ಪಡೆದು ಸಾಕ್ಷ್ಯಾಧಾರ ನಾಶ ಮಾಡದಂತೆ ಎಚ್ಚರಿಕೆ ನೀಡಿ ಹೈಕೋರ್ಟ್ ಷರತ್ತು ನೀಡಿದೆ. ಜೊತೆಗೆ ಬೆಂಗಳೂರು ಬಿಟ್ಟು ಹೊರತೆರಳದಂತೆ ನಿರ್ದೇಶನ ನೀಡಿದೆ. ಹೀಗಾಗಿ ಕೊನೆಗೂ ನಲಪಾಡ್ ನ 116 ದಿನಗಳ ಜೈಲುವಾಸ ಅಂತ್ಯವಾಗಿದ್ದು, ರಂಜಾನ್ ಹಬ್ಬವನ್ನು ಮನೆಯಲ್ಲಿ ಆಚರಿಸುವಂತಾಗಿದೆ.
ಮಲ್ಯ ರಸ್ತೆಯಲ್ಲಿರುವ ಫರ್ಜಿ ಕೆಫೆಯಲ್ಲಿ ಉದ್ಯಮಿ ಲೋಕನಾಥನ್ ಅವರ ಪುತ್ರ ವಿದ್ವತ್ ಮೇಲೆ ನಲಪಾಡ್ ಮತ್ತವನ ಗ್ಯಾಂಗ್ ಗಂಭೀರವಾಗಿ ಹಲ್ಲೆ ನಡೆಸಿತ್ತು. ನಲಪಾಡ್ ಪರ ವಕೀಲ ಬಿ.ವಿ ಆಚಾರ್ಯ ವಾದ ಮಂಡಿಸಿದ್ದಾರೆ.
ಇನ್ನು ನ್ಯಾಯಾಲಯದ ಪ್ರತಿ ಜೈಲಿಗೆ ತಲುಪಬೇಕಾಗಿರುವ ಕಾರಣ, ಸಂಜೆ ೫ ಗಂಟೆಯ ಬಳಿಕ ನಲಪಾಡ್ ರಿಲೀಸ್ ಆಗುವ ನಿರೀಕ್ಷೆ ಇದೆ