ವಿಟ್ಲ, ಡಿ.11 (DaijiworldNews/MB) : ಅಳಿಕೆ ಸತ್ಯಸಾಯಿ ವಿದ್ಯಾ ಸಂಸ್ಥೆಯ ಹಾಸ್ಟೇಲ್ನ ಅಡುಗೆ ಸಹಾಯಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಿಕೆಯಲ್ಲಿ ಸಂಭವಿಸಿದೆ.

ಅಳಿಕೆ ಸತ್ಯಸಾಯಿ ಲೋಕ ಸೇವಾ ಕೇಂದ್ರದ ಹಾಸ್ಟೇಲ್ನಲ್ಲಿ ಅಡುಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಸರಗೋಡು ಜಿಲ್ಲೆಯ ಬೆದ್ರಡ್ಕ ನಿವಾಸಿ ನಾರಾಯಣ ಪಾಟಾಲಿ (55) ಮೃತರು.
ಕಳೆದ 25 ವರ್ಷದಿಂದ ಮೂರ್ಚೆ ರೋಗದಿಂದ ಬಳಲುತ್ತಿರುವ ಕಾರಣ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನಾರಾಯಣ ಪಾಟಾಲಿಯವರು ಗುರುವಾರ ರಾತ್ರಿಯಿಂದ ಕಾಣೆಯಾಗಿದ್ದು ಅವರ ಹುಡುಕಾಟ ನಡೆಸಿದಾಗ ಸಂಸ್ಥೆಗೆ ಸೇರಿದ ಕೆರೆಯ ಬಳಿ ಅವರ ಚಪ್ಪಲಿ ಇರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಫ್ರೇಂಡ್ಸ್ ವಿಟ್ಲ ಸಂಘಟನೆಯ ಮುರಳೀಧರ ಹಾಗೂ ಹೈದರಾಲಿ ಮೇಗಿನಪೇಟೆ ನೇತೃತ್ವದ ಮುಳುಗು ತಜ್ಞರ ತಂಡ ಸುಮಾರು ಒಂದು ಗಂಟೆಗಳ ಕಾಲ ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.