ಉಡುಪಿ, ಡಿ.11 (DaijiworldNews/PY): ಗುಣಮಟ್ಟದ ಮಾಂಸದ ಆಹಾರ ಉತ್ಪನ್ನಗಳಿಗೆ ಹೆಸರುವಾಸಿಯಾದ "ಮೀಟ್ ವಾಲೆ" ಇದರ ನೂತನ ಉಡುಪಿ ಶಾಖೆಯನ್ನು ಮಾಂಡವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಇದರ ಪ್ರವರ್ತಕ ಡಾಕ್ಟರ್ ಜೆರಿ ವಿನ್ಸೆಂಟ್ ಡಯಾಸ್ ಉದ್ಘಾಟಿಸಿದರು.




































ಮೀಟ್ ವಾಲೆ ಸಂಸ್ಥೆಯು ತನ್ನ ವಿಶ್ವ ದರ್ಜೆಯ ಚಿಕನ್, ಮಟನ್ ಮತ್ತು ಮೀನಿನ ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಉಡುಪಿಯ ಪ್ರಥಮ ಶಾಖೆಯು ಇಂದು ಬ್ರಹ್ಮಗಿರಿ ಬಳಿ ಇರುವ ಸಾಯಿರಾಧಾ ಪ್ಯಾಲೇಸ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಮಾಂಡವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಇದರ ಪ್ರವರ್ತಕ ಡಾಕ್ಟರ್ ಜೆರಿ ವಿನ್ಸೆಂಟ್ ಡಯಾಸ್ ಅವರು, "ಹಿಂದಿನ ಕಾಲದಲ್ಲಿ ಮಾಂಸಾಹಾರ ಎಂಬುವುದು ಕೇವಲ ಹಬ್ಬ ಹರಿದಿನಗಳಿಗೆ ಸಿಮಿತವಾಗಿತ್ತು. ಆದರೆ ಇಂದು ನಮ್ಮ ಮಕ್ಕಳು ಮಾಸಾಂಹಾರಕ್ಕೆ ಒಗ್ಗಿಕೊಂಡು ಬಿಟ್ಟಿದ್ದಾರೆ. ಈ ಅಂಗಡಿಯಲ್ಲಿ ವಿಧ ವಿಧದ ಮಾಂಸಾಹಾರದ ಖಾದ್ಯಗಳು ಲಭ್ಯ ಇವೆ. ಇದು ಜನರಿಗೆ ತುಂಬ ಅನುಕೂಲವಾಗಲಿದೆ. ಭಗವಂತನ ಕೃಪೆಯಿಂದ ಇದು ಒಳ್ಳೆಯದಾಗಿ ನಡೆಯಲಿ" ಎಂದರು.
ಉದ್ಘಾಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ನಗರಾಭಿವೃದ್ದಿ ಪ್ರಾದಿಕಾರದ ಅಧ್ಯಕ್ಷ್ಯ ರಾಘವೇಂದ್ರ ಕಿಣಿ ಅವರು, "ಉಡುಪಿಯ ಆಹಾರ ಕೇವಲ ಉಡುಪಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಉಡುಪಿ ಮಾದರಿ. ಉಡುಪಿಗೆ ಬಂದಂತಹ ಯಾವುದೇ ಉದ್ಯಮ ನಿಲ್ಲುವುದಿಲ್ಲ. ಅದು ಇನ್ನೂ ಉತ್ತರೋತ್ತರ ಬೆಳೆಯುತ್ತದೆ. ಹಾಗೆಯೇ ಮಿಟ್ ವಾಲೆ ಕೂಡಾ ಇನ್ನೂ ಅಭಿವೃದ್ದಿಗೊಳ್ಳಲಿ" ಎಂದರು.
ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚಿನ ಧರ್ಮಗುರು ಫಾದರ್ ಸ್ಟ್ಯಾನಿ ಬಿ ಲೋಬೋ ಆಶೀರ್ವಚಿಸಿದರು. ಮೀಟ್ ವಾಲೆ ಉಡುಪಿ ಫ್ರಾಂಚೈಸಿ ಮಾಲಕ ನಿತಿನ್ ಮೆಂಡೋನ್ಸಾ ಮತ್ತು ಎಂಜೆಲ್ ಮೆಂಡೋನ್ಸಾ ಆನ್ ಲೈನ್ ಮುಲಕ ಕಾರ್ಯಕ್ರಮದಲ್ಲಿ ಭಾಗಿಯಾದರು.
ಸೌಹಾರ್ದ ಸಮಿತಿಯ ಅಧ್ಯಕ್ಷ್ಯ ವಿಲ್ಫ್ರೆಡ್ ಡಿಸೋಜಾ, ರೋಟರಿ ಉಡುಪಿ ಮಿಡ್ ಟೌನ್ ಅಧ್ಯಕ್ಷ್ಯ ಫೆಲಿಕ್ಸ್ ಆಳ್ವಾ, ನಿವೃತ್ತ ಪೋಲಿಸ್ ಅಧಿಕಾರಿ ಹೆಚ್.ಡಿ,ಮೆಂಡೋನ್ಸಾ, ಮೀಟ್ ವಾಲೆ ಕಂಪನಿಯ ಸಿಇಒ ಕೃಷ್ಣ ಕುಮಾರ್, ಮಾಲಕರ ಹೆತ್ತವರಾದ ಸಿಂಥಿಯಾ ಮೆಂಡೋನ್ಸಾ ಮತ್ತು ಕಾರ್ಮಿನ್ ಡಿಸೋಜಾ ಫ್ರಾಂಚೈಸಿ ಮ್ಯಾನೇಜರ್ ವಿಲ್ಫ್ರೆಡ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.