ಸುಳ್ಯ, ಡಿ. 11 (DaijiworldNews/SM): ಅಸಿಯಾರ ಪತಿ ಇಬ್ರಾಹಿಂ ಕಲೀಲ್ ಸಂದಾನ ಮಾತುಕತೆಗೆ ಬಾರದ ಹಿನ್ನಲೆಯಲ್ಲಿ ಗುರುವಾರ ರಾತ್ರಿ ಅಂಗಡಿಗೆ ಬೀಗ ಹಾಕಿ ತೆರಳಿದ್ದ ಆಸಿಯಾ ಇಂದು ಬೆಳಿಗ್ಗೆ ಮತ್ತೆ ಚಪ್ಪಲು ಅಂಗಡಿ ತೆರೆದು ಮತ್ತೆ ಧರಣಿ ಮುಂದುವರಿಸಿದ್ದಾರೆ.

ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಆಸಿಯಾ, ಕಳೆದ ರಾತ್ರಿ ನನ್ನ ಬೆಂಗಾವಲಿಗೆ ನಿಂತಿದ್ದ ಇಬ್ಬರು ಯುವಕರ ಪೈಕಿ ಓರ್ವನಿಗೆ ಕಬ್ಬಿಣದ ರಾಡ್ ನಿಂದ ನನ್ನ ವಿರೋಧಿ ಗುಂಪು ಹೊಡೆದು ಹಲ್ಲೆ ನಡೆಸಿದ್ದಾರೆ. ಇದು ದೊಡ್ಡ ಅನ್ಯಾಯ ಎಂದು ಸುಳ್ಯದಲ್ಲಿ ಧರಣಿ ನಿರತ ಕಟ್ಟೆಕಾರ್ಸ್ ಇಬ್ರಾಹಿಂ ಕಲೀಲ್ ಅವರ ಪತ್ನಿ ಆಸಿಯಾ ತಿಳಿಸಿದ್ದಾರೆ.
ಇದಲ್ಲದೆ ತನಗೆ ಕಲೀಲ್ ಕುಟುಂಬದವರಿಂದ ಆಗಿರುವ ಅನ್ಯಾಯ ಬಗ್ಗೆ ಮಾತನಾಡಿದರು. ಬೆಂಗಾವಲಾಗಿ ಹೋಗಿ ನಿಂತ ಯುವಕರು ಗಾಂಧಿನಗರ ರಸ್ತೆ ಮೂಲಕ ನಾವೂರು ರಸ್ತೆಯಲ್ಲಿ ಬೈಕಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಆರೋಪಿಗಳು ರಾಡ್ ನಲ್ಲಿ ಹೊಡೆದರು. ಇದರಿಂದ ಜಯನಗರದ ನವಾಜ್ ಎಂಬಾತ ಗಾಯಗೊಂಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಇದೀಗ ಆತ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾನೆ.