ಮಂಗಳೂರು, ಡಿ.12 (DaijiworldNews/PY): ನವಮಂಗಳೂರು ಬಂದರಿನಲ್ಲಿನ ಆಡಳಿತ ಮಂಡಳಿ ಸ್ಥಾನಕ್ಕೆ ಕಾರ್ಮಿಕ ಯೂನಿಯನ್ ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ನಡೆದ ಚುನಾವಣೆಯಲ್ಲಿ ಇಂಟಕ್ ನಂಬರ್ ಒಂದು ಸ್ಥಾನ ಪಡೆದಿದ್ದು, ದ್ವಿತೀಯ ಸ್ಥಾನವನ್ನು ಎಚ್ಎಂಎಸ್ ಪಡೆಯಿತು.





ಎನ್ಎಂಪಿಟಿಯಲ್ಲಿ ಅತೀ ದೊಡ್ಡ ಕಾರ್ಮಿಕ ಸಂಘಟನೆಯಾಗಿ ಮೂಡಿ ಬಂದ ಪ್ರಯುಕ್ತ ಶುಕ್ರವಾರ ಇಂಟಕ್ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಇಂಟಕ್ ರಾಜ್ಯ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಅವರು ಎಲ್ಲಾ ಸದಸ್ಯರನ್ನು ಅಭಿನಂದಿಸಿದರು. "ಇಂಟಕ್ ಸದಾ ಕಾರ್ಮಿಕರ ಪರವಾಗಿ ಹೋರಾಟ ಮಾಡಲಿದೆ. ಬಂದರಿನಲ್ಲಿ ಯಾವುದೇ ಸಮಸ್ಯೆ ಎದುರಾದರೂ ಬಗೆ ಹರಿಸಿ ಇಂಟಕ್ ಸಂಘಟನೆ ಕರ್ತವ್ಯ ಪಾಲಿಸಲಿದೆ. ಮುಂದೆಯೂ ಇಂಟಕ್ಗೆ ಎರಡೂ ಟ್ರಸ್ಟಿ ಸ್ಥಾನ ಸಿಗುವಂತೆ ಬಲಿಷ್ಟಗೊಳಿಸಬೇಕಿದೆ. ಕಳೆದ ಎರಡು ಅವಧಿಯಲ್ಲಿ ಇಂಟಕ್ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಇಂಟಕ್ನ ಉತ್ತಮ ಕೆಲಸಕ್ಕೆ ಕಾರ್ಮಿಕ ವರ್ಗ ಬೆಂಬಲಿಸುವ ಮೂಲಕ ಗೌರವ ನೀಡಿದೆ" ಎಂದರು.
ಇಂಟಕ್ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ, ಕಳೆದ ಅವಧಿಯ ಟ್ರಸ್ಟಿ ಅಬೂಬಕರ್ ಕೃಷ್ಣಾಪುರ, ಯುವ ಇಂಟಕ್ ರಾಜ್ಯ ಕಾರ್ಯದರ್ಶಿ ದಿನಕರ ಶೆಟ್ಟಿ ಫಾರೂಕ್ ಅವರು ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಶಿವಣ್ಣ ಸ್ವಾಗತಿಸಿದರು. ಭರತ್ ವಂದಿಸಿದರು.