ಮಂಗಳೂರು, ಡಿ.12 (DaijiworldNews/PY): ನಗರದ ಎರಡು ಕಡೆಗಳಲ್ಲಿ ಕಾಣಿಸಿಕೊಂಡ ಉಗ್ರರ ಪರ ಗೋಡೆ ಬರಹಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಾದತ್ (50) ಎನ್ನಲಾಗಿದೆ.
ಡಿ.11ರ ಶುಕ್ರವಾರದಂದು ಸಾದತ್ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಕೊರೊನಾ ಪರೀಕ್ಷೆ ಪೂರ್ಣಗೊಳಿಸದ ಹಿನ್ನೆಲೆ ಆತನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಪ್ರಕರಣದ ಬಗ್ಗೆ ತನಿಖೆ ಚುರುಕುಗೊಂಡಿದೆ.
ಸಾದತ್ ಜವಳಿ ವ್ಯಾಪಾರಿಯಾಗಿದ್ದ. ಶಾಕೀರ್ಗೆ ಆಶ್ರಯ ಹಾಗೂ ಆರ್ಥಿಕ ನೆರವು ನೀಡಿದ್ದು, ಈ ರೀತಿಯ ಕೃತ್ಯಗಳನ್ನು ಮಾಡಲು ಸಾದಿಕ್ ಶಾಕೀರ್ಗೆ ಪ್ರೇರಣೆ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.
ಇನ್ನು ಆರೋಪಿಗಳ ಹೆಚ್ಚಿನ ವಿಚಾರಣೆ ನಡಸುವುದು ಅಗತ್ಯ ಎನ್ನಲಾಗಿದ್ದು, ಈ ನಡುವೆ ಆರೋಪಿಗಳಿಬ್ಬರ ಪೋಷಕರು ತಮ್ಮ ಮಗನನ್ನು ಭೇಟಿಯಾಗಲು ನಗರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಶುಕ್ರವಾರವೂ ಸಭೆ ನಡೆಸಿದ್ದಾರೆ.