ಮಂಗಳೂರು, ಡಿ.12 (DaijiworldNews/HR): ತಿರುವನಂತಪುರಂ ಸೆಂಟ್ರಲ್ ಮತ್ತು ಮಂಗಳೂರು ಕೇಂದ್ರ ನಿಲ್ದಾಣದ ನಡುವೆ ದೈನಂದಿನ ಎಕ್ಸ್ಪ್ರೆಸ್ ವಿಶೇಷ ರೈಲು ಡಿಸೆಂಬರ್ 16 ರಿಂದ ಕಾರ್ಯಾಚರಣೆ ಆರಂಭಿಸಲಿದೆ.

ಸಾಂಧರ್ಭಿಕ ಚಿತ್ರ
ರೈಲು ಸಂಖ್ಯೆ 6347 ತನ್ನ ಪ್ರಯಾಣವನ್ನು ತಿರುವನಂತಪುರಂನಿಂದ ರಾತ್ರಿ 8.50 ಕ್ಕೆ ಪ್ರಾರಂಭಿಸಿ ಮರುದಿನ ಬೆಳಿಗ್ಗೆ 11.35 ಕ್ಕೆ ಮಂಗಳೂರು ಕೇಂದ್ರ ನಿಲ್ದಾಣವನ್ನು ತಲುಪಲಿದೆ.
ರೈಲು ಸಂಖ್ಯೆ 6348 ಡಿಸೆಂಬರ್ 19 ರಿಂದ ಪ್ರಾರಂಭವಾಗಲಿದ್ದು, ಇದು ಮಂಗಳೂರು ಕೇಂದ್ರ ನಿಲ್ದಾಣದಿಂದ ಮಧ್ಯಾಹ್ನ 2.20 ಕ್ಕೆ ಪ್ರಯಾಣವನ್ನು ಪ್ರಾರಂಭಿಸಿ ಮರುದಿನ ಮುಂಜಾನೆ 4.40 ಕ್ಕೆ ತಿರುವನಂತಪುರಂ ಸೆಂಟ್ರಲ್ ತಲುಪುತ್ತದೆ.