ಉಡುಪಿ, ಡಿ.12 (DaijiworldNews/PY): ಸಂತೆಕಟ್ಟೆಯಲ್ಲಿರುವ ರೋಬೋಸಾಫ್ಟ್ ಟೆಕ್ನಾಲಜೀಸ್ನಲ್ಲಿ ಡಿ.11ರ ಶುಕ್ರವಾರ ಮಧ್ಯರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಕಂಪ್ಯೂಟರ್, ಪೀಠೋಪಕರಣಗಳು ಸೇರಿದಂತೆ ಸುಮಾರು 60 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.








ಈ ಬಗ್ಗೆ ದಾಯ್ಜಿವಲ್ಡ್ಗೆ ಮಾಹಿತಿ ನೀಡಿದ ಅಗ್ನಿಶಾಮಕ ಸಿಬ್ಬಂದಿ, "ಮುಂಜಾನೆ 12.45 ಕ್ಕೆ ಕರ್ತವ್ಯದಲ್ಲಿದ್ದ ಕಂಪೆನಿ ಗಾರ್ಡ್ಗಳು ಬೆಂಕಿಯನ್ನು ಗಮನಿಸಿದ್ದು, ಅವರು ತಕ್ಷಣವೇ ಅಗ್ನಿಶಾಮಕ ಸೇವೆಗೆ ಮಾಹಿತಿ ನೀಡಿದ್ದಾರೆ" ಎಂದರು.
ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಪ್ರಕಾರ, ಸರ್ವರ್ ಕೋಣೆಯ ಒಳಗೆ ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿದೆ. ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ಇಡೀ ಕಟ್ಟಡದಲ್ಲಿ ಹೊಗೆ ತುಂಬಿದ್ದು ಕಂಡುಬಂದಿದ್ದು, ಮೊದಲು ಅಗ್ನಿಶಾಮಕ ದಳದವರಿಗೆ ಬೆಂಕಿ ಎಲ್ಲಿ ಸಂಭವಿಸಿದೆ ಎಂದು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಬಳಿಕ ಅವರಿಗೆ ಬೆಂಕಿಯನ್ನು ನಂದಿಸಲು ಸಾಧ್ಯವಾಯಿತು. ಘಟನಾಸ್ಥಳಕ್ಕೆ ಮುಖ್ಯ ಅಗ್ನಿಶಾಮಕ ಅಧಿಕಾರಿ ಧಾವಿಸಿದ್ದಾರೆ.
ಸುಮಾರು 60 ಲಕ್ಷ. ರೂಗಳಿಗಿಂತ ಹೆಚ್ಚು ನಷ್ಟವಾಗಿದೆ ಎಂದು ಹೇಳಲಾಗಿದೆ.