ಉಳ್ಳಾಲ, ಡಿ.12 (DaijiworldNews/MB) : ಮಂಗಳೂರು ವಿಧಾನಸಭಾ ಕ್ಷೇತ್ರದ ಏಳು ಗ್ರಾಮ ಪಂಚಾಯಿತಿಗಳ ಏಳು ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಿನ್ಯಾ ಗ್ರಾಮ ಪಂಚಾಯತ್ 2 ನೇ ವಾರ್ಡ್ನಲ್ಲಿ ಬಾಗಿ, ತಲಪಾಡಿ ಗ್ರಾಮ ಪಂಚಾಯತ್ನ 5 ನೇ ವಾರ್ಡ್ನಲ್ಲಿ ಗೀತಾನಾಯ್ಕ್, ಮುನ್ನೂರು ಗ್ರಾಮ ಪಂಚಾಯತ್ನ 6ನೇ ವಾರ್ಡ್ನಲ್ಲಿ ಪುಷ್ಪ, ಬೆಳ್ಮ ಪಂಚಾಯತ್ನ 1ನೇ ವಾರ್ಡ್ನಲ್ಲಿ ಸುಂದರಿ, ಪಜೀರ್ ಪಂಚಾಯತ್ನ 2ನೇ ವಾರ್ಡ್ನಲ್ಲಿ ವಸಂತಿ, ತುಂಬೆ ಪಂಚಾಯತ್ನ 1ನೇ ವಾರ್ಡ್ನಲ್ಲಿ ಜಯಂತಿ ಕೇಶವ, ಮೇರಮಜಲ್ ಪಂಚಾಯತ್ನ 1ನೇ ವಾರ್ಡ್ನಲ್ಲಿ ವಿಮಲನಾಯಕ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.