ಉಡುಪಿ, ಡಿ.12 (DaijiworldNews/MB) : ಶನಿವಾರ ಮಧ್ಯಾಹ್ನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಅನುಮತಿಯಿಲ್ಲದೆ ಪ್ರತಿಭಟನೆ ಮಾಡಿದ ಐವರನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.








ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಮುಸ್ಲಿಂ ಸಂಘಟನಾ ಕಾರ್ಯಕರ್ತರ ಮೇಲೆ ಈಡಿ ದಾಳಿಯನ್ನು ವಿರೋಧಿಸಿ ಉಡುಪಿಯ ಹೃದಯ ಭಾಗದಲ್ಲಿರುವ ಕ್ಲಾಕ್ ಟವರ್ ಬಳಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಅನುಮತಿ ಇಲ್ಲದೆ ಸರಕಾರದ ವಿರುದ್ಧ ಘೋಷಣೆ ಹಾಕಿ ಪ್ರತಿಭಟನೆ ನಡೆಸಿದರು.
2017 ರಲ್ಲಿ ಈ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರೆ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತದೆ ಎಂಬ ದೃಷ್ಟಿಯಿಂದ ನಿಷೇಧವನ್ನು ಹೇರಿತ್ತು. ಇದನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದು, ಉಡುಪಿ ನಗರ ಠಾಣಾ ಪೋಲೀಸರು ಖುದ್ದು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ತರ್ಕಕ್ಕೆ ತೆಗೆದುಕೊಂಡಿದ್ದಾರೆ. ಸ್ವಲ್ಪ ಹೊತ್ತು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪ್ರತಿಭಟನೆ ನೇತೃತ್ವ ವಹಿಸಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವಾಜ್ ಶೇಖ್, ಉಸಾಮ ಗಂಗೊಳ್ಳಿ, ಝಿಶಾನ್ ಕಂಡ್ಲೂರು, ರಜೀಕ್ ಕುಂದಾಪುರ ಮತ್ತು ಮಸೂದ್ ಬ್ರಹ್ಮಾವರ ಬಂಧಿತರು.
ವಾಹನ ಸುಗಮ ಸಂಚಾರಕ್ಕೆ ಅಡ್ಡಿ ಪಡಿಸಿದ್ದು, ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿದ ಹಾಗು ರಾಯಟ್ ಆ್ಯಕ್ಟ್ ಪ್ರಕಾರ ಕೇಸು ಬೇಲೆಬಲ್ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ. ಸದ್ಯ ಐವರು ಪೋಲಿಸರ ವಶದಲ್ಲಿದ್ದಾರೆ.
2017 ರ ಜಿಲ್ಲಾಡಳಿತ ದ ಆದೇಶದ ನಂತರ ಅಜ್ಜರಕಾಡಿನಲ್ಲಿರುವ ಹುತಾತ್ಮರ ಸ್ಮಾರಕದ ಎದುರು ಪ್ರತಿಭಟನೆ ಮಾಡಲು ಅನುವು ಮಾಡಿ ಕೊಟ್ಟಿತ್ತು.