ಮಂಗಳೂರು, ಜೂ 15: ಗೋವಾದ ರೆಸ್ಟೋರೆಂಟ್ ಗಳಲ್ಲಿ ಕಪ್ಪೆ ಖಾದ್ಯಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆ ಕರಾವಳಿಯಲ್ಲಿ ಕಪ್ಪೆ ಭೇಟೆ ಆರಂಭವಾಗಿದೆ.
ಮಳೆಗಾಲದ ಸಮಯದಲ್ಲಿ ಕರಾವಳಿಯ ಭಾಗಗಳಲ್ಲಿ ಕಪ್ಪೆಗಳು ಹೆಚ್ಚಾಗಿ ಕಂಡುಬರುತ್ತದೆ. ಕೆರೆ, ತೊರೆ, ನಾಲೆ, ಕಾಲುವೆ, ಸೇರಿದಂತೆ ಕಾಡಿನಂಚಿನಲ್ಲಿ ಕಪ್ಪೆಗಳು ವಾಸವಿರುತ್ತದೆ. ಗೋವಾದಲ್ಲಿ ಕಪ್ಪೆ ಬೇಟೆಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇದೀಗ ಈ ಕಪ್ಪೆಗಳನ್ನು ಹಿಡಿಯಲು ಗೋವಾದ ಟೀಂ ಕರಾವಳಿಯತ್ತ ಮುಖ ಮಾಡಿದೆ. ಈ ಒಟರ್ ಗುಟ್ಟುವ ಕಪ್ಪೆಗಳಿಗೆ ಗೋವಾದ ರೆಸ್ಟೋರೆಂಟ್ ಗಳಲ್ಲಿ ಭಾರೀ ಬೇಡಿಕೆ ಇದೆ.
ಕತ್ತಲಾಗುತ್ತಿದ್ದಂತೆ ಈ ತಂಡಗಳು ಕಪ್ಪೆಗಳ ಬೇಟೆಗೆ ಇಳಿಯುತ್ತವೆ. ಕೆರೆ, ತೊರೆಗಳಲ್ಲಿ ಸಿಗುವ ದೊಡ್ಡ ದೊಡ್ಡ ಗಾತ್ರದ ಕಪ್ಪೆಗಳನ್ನು ಹಿಡಿದು, ಈ ತಂಡ ಗೋವಾದ ರೆಸ್ಟೋರಂಟ್ ಗಳಿಗೆ ರವಾನಿಸುತ್ತದೆ. ವಿದೇಶಿಯರಿಗೆ ಭಾರೀ ಪ್ರೀಯವಾಗಿರುವ ಈ ಕಪ್ಪೆಗಳನ್ನು ಈ ರೆಸ್ಟೋರಂಟ್ ಗಳು ಹಚ್ಚಿನ ಹಣ ನೀಡಿ ಖರೀದಿಸುತ್ತಿವೆ. ಒಂದು ದೊಡ್ಡ ಗಾತ್ರದ ಕಪ್ಪೆಗೆ 300 ರಿಂದ 450 ರೂಪಾಯಿ ನೀಡಿ ಖರೀದಿಸಲಾಗುತ್ತದೆ. ಕಪ್ಪೆಗಳ ಗಾತ್ರಗಳಿಗೆ ತಕ್ಕಂತೆ ಬೆಲೆ ಇರುತ್ತದೆ.
ಗೋವಾದ ಪ್ರತಿಷ್ಠಿತ ಹೊಟೇಲ್ ಗಳಲ್ಲಿ ಕಪ್ಪೆ ಮಾಂಸಕ್ಕೆ ಜಂಪಿಂಗ್ ಚಿಕನ್ ಎಂದು ಹೆಸರು. ದೊಡ್ಡ ಗಾತ್ರದ ಕಪ್ಪೆಗಳಿಗೆ ಗೋವಾದಲ್ಲಿ ಭಾರೀ ಬೇಡಿಕೆ ಇದೆ.