ಉಡುಪಿ, ಜೂ16: ಧರ್ಮ ಸಮನ್ವಯತೆಗೆ ಧಕ್ಕೆ ಭರಿಸುತ್ತಾ ಕೋಮು ಗಲಭೆ, ಅಹಿತಕರ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಕರಾವಳಿ, ಈ ಭಾರಿ ಈದುಲ್ ಪಿತ್ರ್ ಹಬ್ಬವನ್ನು ಸರ್ವ ಧರ್ಮದವರು ಜೊತೆಯಾಗಿ ಸೇರಿ ಆಚರಿಸುವ ಮೂಲಕ ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಕನ್ನಡಿ ಹಿಡಿದಿದೆ.
ವಿಶ್ವ ಸಮುದಾಯಕ್ಕೆ ಶಾಂತಿ, ಸ್ನೇಹ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ಈದುಲ್ ಪಿತ್ರ್ ಹಬ್ಬವನ್ನು ಕರಾವಳಿಯಾದ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ಉಡುಪಿ ನಾಯರ್ ಕೆರೆ ಹಾಶ್ಮಿ ಮಸೀದಿಯಲ್ಲಿ ಸಾಂಪ್ರದಾಯಿಕ ಸಂಭ್ರಮ, ಉತ್ಸಾಹದೊಂದಿಗೆ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಗಿದ್ದು, ಮುಸಲ್ಮಾನ ಬಾಂದವರು ಕೋಮು ಸೌಹರ್ದತೆಯ ಸಂದೇಶವನ್ನು ರವಾನಿಸಿದ್ದಾರೆ. ವೌಲಾನಾ ಹಾಶ್ಮಿ ನೇತೃತ್ವದಲ್ಲಿ ಮಸೀದಿ ಸಮಿತಿಯ ಸದಸ್ಯರು ನೆರೆಹೊರೆಯ ಅನ್ಯಧರ್ಮೀಯರ ಮನೆಗಳಿಗೆ ಭೇಟಿ ನೀಡಿ ಸಿಹಿ ಹಂಚಿ ಹಬ್ಬ ಆಚರಿಸಿ ಸಮಭ್ರಮಿಸಿದ್ದಾರೆ. ಈ ಮೂಲಕ ಸೌಹರ್ದತೆಯ ಸಮಾಜ ನಿರ್ಮಾಣಕ್ಕೆ ಹಿಂದೂ-ಮುಸ್ಲಿಂ-ಕ್ರೈಸ್ತರು ಕನ್ನಡಿ ಹಿಡಿದಿದ್ದಾರೆ.
ಹಿಂದೂ ಮತ್ತು ಕ್ರೈಸ್ತ ಬಾಂಧವರು, ಮುಸ್ಲಿಮರಿಗೆ ಈದುಲ್ ಪಿತ್ರ್ ಹಬ್ಬದ ಶುಭಾಶಯವನ್ನು ಕೋರುವುದರೊಂದಿಗೆ, ಜೊತೆಯಾಗಿ ಸೇರಿ ಹಬ್ಬ ಆಚರಿಸಿದ್ದಾರೆ.ಈ ಮೂಲಕ ಸರ್ವ ಧರ್ಮೀಯರು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.