ಉಡುಪಿ, ಡಿ. 16 (DaijiworldNews/SM): ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಜಿಲ್ಲೆಯ ಕೆಮ್ಮಣ್ಣು ನದಿಯಲ್ಲಿ ಡಿಸೆಂಬರ್ 16ರ ಬುಧವಾರ ಪತ್ತೆಯಾಗಿದೆ.

ಅದೇ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸ್ಥಳೀಯ ಯುವಕರಲ್ಲಿ ಕೆಲವರು ಶವವನ್ನು ಗಮನಿಸಿದರು. ಬಳಿಕ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಸದ್ಯ ಮೃತದೇಹವನ್ನು ಅಜ್ಜರಕಾಡು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ವರದಿಗಳ ಪ್ರಕಾರ, ನದಿಯಲ್ಲಿ ಮುಳುಗಿದ ಕಾರಣ ಆ ವ್ಯಕ್ತಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.