ಕಾಸರಗೋಡು, ಜೂ 17: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಜೇಶ್ವರದ ಕುಂಜತ್ತೂರಿನಲ್ಲಿ ನಡೆದಿದೆ.ಕುಂಜತ್ತೂರು ತೂಮಿನಾಡಿನ ಪ್ರತಿಭಾ (14) ಮೃತಪಟ್ಟವರು, ಶನಿವಾರ ರಾತ್ರಿ ಘಟನೆ ನಡೆದಿದೆ. ಟಿ . ವಿ ಯ ರಿಮೋಟ್ ಗಾಗಿ ಸಹೋದರರೊಂದಿಗೆ ಜಗಳವಾಡಿದ್ದು , ಮನನೊಂದ ಈಕೆ ಬಾವಿಗೆ ಹಾರಿದ್ದಾಳೆ ಎನ್ನಲಾಗಿದೆ.
ಮನೆಯವರು ಬಾವಿಯಿಂದ ಮೇಲಕ್ಕೆತ್ತಲೂ ಪ್ರಯತ್ನಿಸಿದರೂ ನೀರು ತುಂಬಿಕೊಂಡಿರುವುದರಿಂದ ವಿಫಲವಾಗಿದ್ದು , ಉಪ್ಪಳದಿಂದ ತಲಪಿದ ಅಗ್ನಿಶಾಮಕ ದಳದ ಸಿಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದರು. ಮಂಜೇಶ್ವರದ ಖಾಸಗಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.