ಉಡುಪಿ, ಡಿ.17 (DaijiworldNews/PY): "ವಿಧಾನಪರಿಷತ್ ಸದನದಲ್ಲಿ ನಡೆದ ಗಲಾಟೆ ಎಲ್ಲರಿಗೂ ಗೊಂದಲಕ್ಕೆ ಕಾರಣವಾಗಿದೆ. ಇದಕ್ಕೆ ಕಾಂಗ್ರೆಸ್ಸೀಕರಣವೇ ಕಾರಣ. ಈ ಹಿಂದೆಯೂ ಶಂಕರಮೂರ್ತಿಯವರ ಮೇಲೆ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲಾಗಿತ್ತು. ಸದನದಲ್ಲಿ ಇದೇ ಮೊದಲ ಬಾರಿಗೆ ಗೊಂದಲ ಸೃಷ್ಟಿಯಾಗಿದ್ದು, ಅದಕ್ಕೆ ನೇರವಾಗಿ ಕಾಂಗ್ರೆಸ್ ಹೊಣೆ" ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಉಡುಪಿಯಲ್ಲಿ ಡಿ.17ರ ಗುರುವಾರದಂದು ಆರೋಪ ಮಾಡಿದ್ದಾರೆ.


ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, "ಡಿ.15ರ ಮಂಗಳವಾರದಂದು ಅವಿಶ್ವಾಸ ಗೊತ್ತುವಳಿಗೆ ಕೊನೆಯ ದಿನವಾಗಿತ್ತು. ಸಭಾಪತಿ ಪ್ರತಾಪ್ ಚಂದ್ರ ಹೆಗ್ಡೆ ಅವರನ್ನು ಕಾಂಗ್ರೆಸ್ ನಾಯಕರು ಕಟ್ಡಿ ಹಾಕದಿದ್ದರೆ ಈ ಗೊಂದಲ ನಡೆಯುತ್ತಿರಲಿಲ್ಲ. ಇದಕ್ಕೆಲ್ಲ ಕಾಂಗ್ರೆಸ್ ದುಸ್ಥಿತಿಯೇ ಕಾರಣ" ಎಂದರು.
"ಸಭಾಪತಿ ಪೀಠದಲ್ಲಿದ್ದು ತಿರಸ್ಕರಿಸುವುದು ಸದನವೇ ಹೊರತು ಸಭಾಪತಿ ಪೀಠ ಅಲ್ಲ. ಇದು ಕಾಯ್ದೆ, ಸಂವಿಧಾನದಲ್ಲಿದೆ. ರಾಜಧರ್ಮ ಪಾಲಿಸಬೇಕಾದ ಕಾಂಗ್ರೆಸ್ ಪಕ್ಷ ಸಭಾಪತಿಯವರನ್ನು ನಿಯಂತ್ರಣ ಮಾಡಿ ಅತ್ಯಂತ ವ್ಯವಸ್ಥೆಯಿಂದ ಅವಿಶ್ವಾಸ ಗೊತ್ತುವಳಿ ಮಂಡನೆ ಆಗದಂತೆ ನೋಡಿಕೊಂಡಿದೆ" ಎಂದು ಹೇಳಿದರು.
"ಸಹಜವಾಗಿ ರಾಜ್ಯಪಾಲರ ಮೊರೆ ಹೋಗಿದ್ದೇವೆ. ಇದರ ಬಗ್ಗೆ ಚರ್ಚೆ ಆಗಬೇಕು. ಮತದಾನಕ್ಕೆ ಕೂಡಲೇ ದಿನಾಂಕ ಗೊತ್ತು ಪಡಿಸಬೇಕು ಎಂದು ಕೋರಿಲಾಗಿದೆ. ವಿಧಾನ ಪರಿಷತ್ತನ್ನು ರದ್ದು ಮಾಡುವ ಮಾತೇ ಇಲ್ಲ. ಇಲ್ಲಿ ಇನ್ನು ಯಾವುದೇ ತಿರಸ್ಕಾರ ಆಗಿಲ್ಲ. ಮೇಲ್ಮನವಿ ಅತ್ಯಂತ ವ್ಯವಸ್ಥಿತವಾಗಿ ಜವಾಬ್ದಾರಿ ಯುತವಾಗಿ ಕೆಲಸ ನಿರ್ವಹಿಸಬೇಕಾಗಿದೆ. ಸಭಾಪತಿಯ ಯಾರೆಂಬ ತೀರ್ಮಾನ ಬಿಜೆಪಿಯದ್ದು. ನಮ್ಮ ವರಿಷ್ಠರು ನಿರ್ಧಾರ ಮಾಡುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ" ಎಂದರು.
ಇನ್ನು ಹೊರಟ್ಟಿಯವರನ್ನು ಸಭಾಪತಿ ಮಾಡುವ ವಿಚಾರಕ್ಕೆ ಸಚಿವರು ಉತ್ತರಿಸದೇ, "ಗೊಂದಲ ನಿವಾರಣೆ ಆದ ನಂತರ ಎಲ್ಲವೂ ನಿರ್ಧಾರ ಆಗುತ್ತದೆ" ಎಂದರು.
ಗೋ ಹತ್ಯಾ ಕಾಯ್ದೆ ನಿಷೇಧ ಬಗ್ಗೆ ಮಾತನಾಡಿ, "ಕೆಳಮನೆಯಲ್ಲಿ ಅಂಗೀಕಾರ ಆಗಿದೆ. ಸುಗ್ರೀವಾಜ್ಞೆ ಮೂಲಕ ಆ ಕಾಯ್ದೆಯನ್ನು ಜಾರಿ ತಂದೇ ತರುತ್ತೆ ಸರಕಾರ" ಎಂದರು.
ನಂತರ ಮೀನುಗಳ ಮೇಲೆ ಫಾರ್ಮಾಲಿನ್ ರಾಸಾಯನಿಕವನ್ನು ಹಾಕುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ಇದಕ್ಕೂ ಮೊದಲೇ ದೂರು ಇತ್ತು. ಗಂಭೀರ ತನಿಖೆ ನಡೆಸಲು ಮತ್ತು ಅದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲು ನಾನು ಮೀನುಗಾರಿಕೆ ಇಲಾಖೆಗೆ ಸೂಚನೆ ನೀಡಿದ್ದೇನೆ" ಎಂದರು.
"ಸಿಆರ್ಝಡ್ ಪ್ರದೇಶದಲ್ಲಿ ವಾಸಿಸುತ್ತಿರುವ ಕೋಡಿ ಗ್ರಾಮಸ್ಥರಿಗೆ ಆರ್ಟಿಸಿ ಮಂಜೂರು ಮಾಡುವುದು ಮತ್ತೊಂದು ವಿಷಯವಾಗಿತ್ತು. ಕಾನೂನು ಆಕ್ಷೇಪಣೆಗಳಿದ್ದರೂ, ನಾನು 18 ಕುಟುಂಬಗಳಿಗೆ ಆರ್ಟಿಸಿ ಒದಗಿಸಲು ಸಾಧ್ಯವಾಯಿತು" ಎಂದರು.
"ಈಗ ಸರ್ಕಾರ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ದರವನ್ನು ನಿಗದಿಪಡಿಸಿತ್ತು. ಆದರೆ ಗ್ರಾಮಸ್ಥರು ಮಾರುಕಟ್ಟೆ ಬೆಲೆಗೆ ರಿಯಾಯಿತಿ ಕೋರಿದ್ದಾರೆ. ನಿಜವಾದ ಬೆಲೆ 5000 ರೂ. ಆದರೆ ಸೆಂಟ್ಸ್ (ಮಾರುಕಟ್ಟೆ ಬೆಲೆಯಲ್ಲಿ 10%). ನಾವು ನಿರ್ಣಯವನ್ನು ಅಂತಿಮಗೊಳಿಸಿದ್ದೇವೆ ಮತ್ತು ಅನುಮೋದನೆ ಪಡೆಯಲು ಕ್ಯಾಬಿನೆಟ್ ಸಚಿವಾಲಯವನ್ನು ಕಳುಹಿಸಲು ಎಲ್ಲರೂ ಸಿದ್ಧರಾಗಿದ್ದೇವೆ" ಎಂದು ಹೇಳಿದರು.
"ಪ್ರಜಾಪ್ರಭುತ್ವದಲ್ಲಿ ಅವರು ಚುನಾವಣೆಯನ್ನು ಬಯಸದಿದ್ದರೆ ಬಿಟ್ಟು ಬಿಡಲಿ. ಪ್ರತಿಭಟನಾಕಾರರು ಎಲ್ಲವನ್ನೂ ತಿಳಿದಿದ್ದರು, ಆದರೆ ಇನ್ನೂ ಪ್ರತಿಭಟನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಪ್ರತಿ ಬಾರಿಯೂ ಅವರು ಚುನಾವಣೆಯ ಸಮಯದಲ್ಲಿ ಪ್ರತಿಭಟನೆ ಮಾಡುತ್ತಾರೆ. ಯಾರೂ ಅವರನ್ನು ಒತ್ತಾಯಿಸುವುದಿಲ್ಲ. ಚುನಾವಣಾ ಆಯೋಗ ಮುಂದಿನ ಹೆಜ್ಜೆ ಇಡಲಿದೆ" ಎಂದು ತಿಳಿಸಿದರು.
"ಮೀನುಗಾರಿಕೆ ರಸ್ತೆ ನಿರ್ಮಾಣಕ್ಕಾಗಿ 7 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭವಾಗಿದೆ. ಇದಕ್ಕೆ ಹೆಚ್ಚುವರಿಯಾಗಿ, ಮೂಲಸೌಕರ್ಯ ಸೌಲಭ್ಯಗಳಿಗಾಗಿ ಗ್ರಾಮೀಣಾಭಿವೃದ್ಧಿ ಅಡಿಯಲ್ಲಿ 75 ಲಕ್ಷ ರೂ. ಮೀಸಲಿಡಲಾಗಿದೆ" ಎಂದರು.
ಸಪ್ತಪದಿ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಕೊರೊನಾ ಮಾರ್ಗಸೂಚಿಯ ಪ್ರಕಾರ ಈ ಯೋಜನೆಯಲ್ಲಿ ಸರ್ಕಾರ ಸ್ವಲ್ಪ ಬದಲಾವಣೆ ತಂದಿದೆ. ಇನ್ನು ಮುಂದೆ ಇದನ್ನು ತಿಂಗಳ ಪ್ರಕಾರ ನಡೆಸಲಾಗುವುದು. ಸಾಮೂಹಿಕ ವಿವಾಹವು 2021ರ ಜನವರಿಯಲ್ಲಿ 15 ರಿಂದ 30 ರವರೆಗೆ ನಡೆಯಲಿದೆ" ಎಂದರು.
"ಸಚಿವ ಸಂಪುಟ ವಿಸ್ತರಣೆಯ ನಿರ್ಧಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ತೆಗೆದುಕೊಳ್ಳಲಿದ್ದಾರೆ" ಎಂದು ಹೇಳಿದರು.
"ಲವ್ ಜಿಹಾದ್ ನಿಷೇಧ ಕಾಯ್ದೆ ಪ್ರಗತಿಯಲ್ಲಿದೆ ಮತ್ತು ಇದು ಸುಗ್ರೀವಾಜ್ಞೆಯ ಮೂಲಕವೂ ಜಾರಿಗೆ ಬರಲಿದೆ. ನಮ್ಮ ಪಕ್ಷ ಮತ್ತು ಧರ್ಮವು ಈ ಕೃತ್ಯವನ್ನು ಬೆಂಬಲಿಸುತ್ತದೆ" ಎಂದರು.