ಉಡುಪಿ, ಡಿ.17 (DaijiworldNews/HR): ವಿದ್ಯೋದಯ ಪಬ್ಲಿಕ್ ಸ್ಕೂಲ್ನ ಏಳನೇ ತರಗತಿ ವಿದ್ಯಾರ್ಥಿ ಅನಮಯ ಯೋಗೇಶ್ ದಿವಾಕರ್ ವಿದ್ಯಾರ್ಥಿಗಳ ವಾರದ ವಿಶೇಷ ಆವೃತ್ತಿಯ ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಟಿ.ವಿ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ರೂ.ಗಳನ್ನು ಗೆದ್ದಿದ್ದಾರೆ.

ವಿದ್ಯಾರ್ಥಿಗಳ ವಿಶೇಷ ವಾರದಲ್ಲಿ ಭಾಗವಹಿಸುವವರನ್ನು ಆಯ್ಕೆ ಮಾಡಲು ಆನ್ಲೈನ್ನಲ್ಲಿ ಅಕ್ಟೋಬರ್ 5 ರಿಂದ 25 ರವರೆಗೆ ಆನ್ಲೈನ್ ರಸಪ್ರಶ್ನೆ ಆಯೋಜಿಸಿತ್ತು. 10 ರಿಂದ 14 ವರ್ಷದೊಳಗಿನ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ರಸಪ್ರಶ್ನೆಯಲ್ಲಿ ಭಾಗವಹಿಸಿದ್ದರು. ಮೊದಲ ಸುತ್ತಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಅವುಗಳಲ್ಲಿ, ಅತಿ ಹೆಚ್ಚು ಅಂಕ ಪಡೆದ 200 ವಿದ್ಯಾರ್ಥಿಗಳಿಗೆ ಸಂದರ್ಶನ ನಡೆಯಿತು. ಬಳಿಕ ಕೌನ್ ಬನೇಗಾ ಕರೋಡ್ ಪತಿ ಶೋನ ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ಎಂಟು ವಿದ್ಯಾರ್ಥಿಗಳಲ್ಲಿ ಉಡುಪಿಯ ಅನಮಯ ಕೂಡ ಒಬ್ಬರಾಗಿದ್ದಾರೆ.
ಗೇಮ್ ಶೋಗೆ ಪ್ರವೇಶಿಸಿದ ಮೂರನೇ ಸ್ಪರ್ಧಿ ಅನಮಯ 14 ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಿ 15 ನೇ ಪ್ರಶ್ನಿಗೆ ಉತ್ತರ ಕೊಡಲು ಕಷ್ಟವಾದ ಕಾರಣ ಆಟವನ್ನು ನಿಲ್ಲಿಸುವ ಮೂಲಕ 50 ಲಕ್ಷ ರೂ.ಗಳ ಬಹುಮಾನವನ್ನು ಗೆದ್ದಿದ್ದಾರೆ.